Headlines

ಶಿವಮೊಗ್ಗದ ಚೋರ್ ಬಜಾರ್ ನಲ್ಲಿ ಗಲಾಟೆ ; ಮುಂಜಾಗ್ರತೆಯಿಂದ ಬಜಾರ್ ಬಂದ್

ಶಿವಮೊಗ್ಗ : ಚೋರ್ ಬಜಾರ್ ನಲ್ಲಿ ಗಲಾಟೆ ಆಗಿದ್ದು ಬಜಾರ್ ನ್ನು ಬಂದ್ ಮಾಡಲಾಗಿದೆ.
ವ್ಯಾಪಾರಸ್ಥರ ನಡುವೆಯೇ ಈ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ. ಸುಮಾರು 8-10 ಜನ ಗಲಾಟೆ ಮಾಡಿದ್ದೂ ಇವರಲ್ಲಿ ಕೆಲವರ ಬಳಿ ಹರಿತವಾದ ಆಯುಧಗಳು ಕಂಡು ಬಂದಿದೆ. 
ಯಾವುದೇ  ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಟ್ಟೆ ಮಾರುಕಟ್ಟೆಯನ್ನ ಬಂದ್ ಮಾಡಲಾಗಿದೆ.
ನಗರದ ಗಾಂಧಿ ಬಜಾರ್ ಸಮೀಪದ ಶಿವಮೊಗ್ಗ ಚೋರ್ ಬಜಾರ್ ಖ್ಯಾತಿಯ ಬಟ್ಟೆ ಮಾರುಕಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೋರ್ ಬಜಾರ್ ನ್ನ ಬಂದ್ ಮಾಡಲಾಗಿದೆ.
ಈ ವರೆಗೆ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವ್ಯಾಪಾರಸ್ಥರ ನಡುವೆಯೇ ಈ ಗಲಾಟೆ ನಡೆದಿರುವುದಾಗಿ ವರದಿಯಾಗಿದೆ. ಆದರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಟ್ಟೆ ಮಾರುಕಟ್ಟೆಯನ್ನ ಬಂದ್ ಮಾಡಲಾಗಿದೆ.

About The Author

Leave a Reply

Your email address will not be published. Required fields are marked *