January 11, 2026

ತೀರ್ಥಹಳ್ಳಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಆತ್ಮಹತ್ಯೆ : ಅತಿಥಿ ಉಪನ್ಯಾಸಕರ ಮೇಲಿನ ಸರ್ಕಾರದ ನಿರ್ಲಕ್ಷ್ಯವೇ ಆತ್ಮಹತ್ಯೆಗೆ ಕಾರಣವಾಯಿತಾ ?????

ತೀರ್ಥಹಳ್ಳಿ: ಇಲ್ಲಿನ ಸರ್ಕಾರಿ ಪದವಿ ಕಾಲೇಜಿನ  ಗಣಕ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕರಾಗಿದ್ದ  ಶ್ರೀಹರ್ಷ ಶಾನ್ ಬೋಗ್(38) ಇವರು ತಮ್ಮ ಹೆಬ್ರಿ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಶ್ರೀಹರ್ಷ ಸುಮಾರು 13 ವರ್ಷಕ್ಕೂ ಹೆಚ್ಚು ಕಾಲದಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಅತ್ಯಂತ ಉತ್ತಮ ಉಪನ್ಯಾಸಕ ಎಂದು ಹೆಸರು ಪಡೆದವರು, ಕೊರೊನ ಸಂಕಷ್ಟ ಪರಿಸ್ಥಿತಿ ಜೀವನ ನಿರ್ವಹಣೆಯ ಕಷ್ಟ ಸಾಧ್ಯ, ಅತಿಥಿ ಉಪನ್ಯಾಸರಿಗೆ ಸರ್ಕಾರದ ಸೇವಾ ಭದ್ರತೆ ಆರ್ಥಿಕ ನೆರವು ಇಲ್ಲದಿರುವುದನ್ನು ಮನಗಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅವರ ಸಹಪಾಠಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ರಾಜ್ಯಾದ್ಯಂತ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ ಸರ್ಕಾರ ಇವರ ಪ್ರತಿಭಟನೆಗೆ ಕಿವಿಗೊಡುತ್ತಿಲ್ಲದ್ದಿರುವುದು ವಿಷಾಧನೀಯ ಸಂಗತಿಯಾಗಿದೆ.

 ಶಿಕ್ಷಣ ನೀಡುವ ಉಪನ್ಯಾಸಕರುಗಳೇ ಸರ್ಕಾರದ ನೆರವು ಸಿಗದೇ ಮನನೊಂದು ಈ ರೀತಿ ಆತ್ಮಹತ್ಯೆಗೆ ಶರಣಾಗಿರುವುದು ನಿಜಕ್ಕೂ ದುರ್ದೈವವೇ ಸರಿ.

About The Author

Leave a Reply

Your email address will not be published. Required fields are marked *