Headlines

Ripponpete | ಬಸವ ಜಯಂತಿ ಆಚರಣೆ | ಬಸವಣ್ಣನವರ ತತ್ವ ಆದರ್ಶ ಇಂದಿನ ಸಮಾಜಕ್ಕೆ ಮಾದರಿ – ಕಗ್ಗಲಿ ಲಿಂಗಪ್ಪ

Ripponpete | ಬಸವ ಜಯಂತಿ ಆಚರಣೆ  | ಬಸವಣ್ಣನವರ ತತ್ವ ಆದರ್ಶ ಇಂದಿನ ಸಮಾಜಕ್ಕೆ ಮಾದರಿ – ಕಗ್ಗಲಿ ಲಿಂಗಪ್ಪ

ರಿಪ್ಪನ್‌ಪೇಟೆ : 12 ನೆ ಶತಮಾನದಲ್ಲಿಯೇ ಬಸವಣ್ಣನವರು ಜಾತಿ,ಮತ,ಬೇಧ ತೊಡೆದು ಎಲ್ಲಾರೂ ಒಂದೇ ಎಂದು ಸಮಾನತೆ ಸಾರಿದ ಮಹಾನ್ ಪುರುಷ,ಅವರ ತತ್ವ ಆದರ್ಶಗಳನ್ನು ಇಂದಿನ ಜನಾಂಗ ಅನುಸರಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಶ್ರೀ ಶಿವಕುಮಾರ ಸ್ವಾಮೀಜಿ ಭಕ್ತ ವೃಂದದ ಪ್ರಮುಖರಾದ ಕಗ್ಗಲಿ ಲಿಂಗಪ್ಪ ಹೇಳಿದರು.


ಪಟ್ಟಣದ ಮಂಜುಶ್ರೀ ಹೊಟೇಲ್ ಆವರಣದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಭಕ್ತವೃಂದದ ವತಿಯಿಂದ ಆಯೋಜಿಸಿದ್ದ 891ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳ ಹಿಂದೆಯೇ ಬಸವೇಶ್ವರರು ಸಮಾನತೆಯ ಮೂಲಕ ಸುಭಿಕ್ಷಾ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದವರು, ಕಂದಾಚಾರ,ಜಾತೀಯತೆ ಸಮಾಜಕ್ಕೆ ಮಾರಕವೆಂದು ತಿಳಿಹೇಳಿದವರು, ಕಳಬೇಡ,ಕೊಲಬೇಡ ಎಂಬ ಸಪ್ತ ತತ್ವಗಳನ್ನು ಬೋದಿಸಿದವರು ಈ ತತ್ವವನ್ನು ನಾವುಗಳು ಪಾಲಿಸಿದರೆ ಅಪರಾಧ ಮುಕ್ತ ಸಮಾಜ ನಿರ್ಮಾಣ ವಾಗುತ್ತದೆ ಎಂದರು. 

ಕಾಯಕಯೋಗಿ ಬಸವೇಶ್ವರ ಜಯಂತಿಯ ಅಂಗವಾಗಿ ಎಲ್ಲಾರಿಗೂ ಸಿಹಿ ಹಂಚಲಾಯಿತು.

ಈ ಸಂಧರ್ಭದಲ್ಲಿ ಮಂಜುಶ್ರೀ ಹೊಟೇಲ್ ನ ಸಿದ್ದೇಶ್ , ಗಣೇಶ್ ,ಮೇಘಾ ,ವಿಜೇತಾ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಭಕ್ತ ವೃಂದದ ರಾಘವೇಂದ್ರ , ಸತೀಶ್ ಹೆಗಡೆ , ಹರೀಶ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *