Headlines

ಆನ್ ಲೈನ್ ಕೆಲಸ ನಂಬಿ ಲಕ್ಷಾಂತರ ರೂ ಕಳೆದುಕೊಂಡ ಯುವತಿ | online fraud

ಆನ್ ಲೈನ್ ಕೆಲಸ ನಂಬಿ ಲಕ್ಷಾಂತರ ರೂ ಕಳೆದುಕೊಂಡ ಯುವತಿ | online fraud

ಶಿವಮೊಗ್ಗ : ಟೆಲಿಗ್ರಾಂ ಆ್ಯಪ್ ಮೂಲಕ ಬಂದ ಉದ್ಯೋಗದ ಭರವಸೆ ನಂಬಿ ಯುವತಿಯೊಬ್ಬಳು ಲಕ್ಷಾಂತರ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.

ಉದ್ಯೋಗ ಅರಸಿ ಆನ್ ಲೈನ್ ಮೊರೆ ಹೋದ ಯುವತಿಯೊಬ್ಬಳು ಉದ್ಯೋಗ ಹುಡುಕುತ್ತಾ ಬರೋಬ್ಬರಿ 11,82,208 ರೂ. ಕಳೆದುಕೊಂಡಿದ್ದಾಳೆ. 

ನಡೆದಿದ್ದೇನು..???

ಡ್ರೀಮ್ ಹೊಟೆಲ್ ಗ್ರೂಪ್ ಸಂಸ್ಥೆಯನ್ನು ಪ್ರಮೋಷನ್ ಮಾಡಲು ತಿಳಿಸಿದ್ದ ಅಪರಿಚಿತ ವ್ಯಕ್ತಿಗಳು ಶಿವಮೊಗ್ಗದ ಈ ಯುವತಿಯಿಂದ ಲಕ್ಷಾಂತರ ಹಣವನ್ನು ಪೀಕಿಸಿಕೊಂಡು ಮರೆಯಾಗಿದ್ದಾರೆ.

ಶಿವಮೊಗ್ಗದ ಗಾಂಧಿ ಬಜಾರ್ ನ ತುಳಜಾ ಭವಾನಿ ರಸ್ತೆಯಲ್ಲಿ ವಾಸವಿರುವ ಯುವತಿ ಕಳೆದ ಹಲವಾರು ದಿನಗಳಿಂದ ಆನ್ ಲೈನ್ ನಲ್ಲಿ ಕೆಲಸ ಸರ್ಚ್ ಮಾಡುತ್ತಿದ್ದರು. ಇವರಿಗೆ ಟೆಲಿಗ್ರಾಂ ನಲ್ಲಿ ಸ್ವಾತಿ ಮಿಶ್ರಾ ಎಂಬ ಅಪರಿಚಿತ ಟೆಲಿಗ್ರಾಂ ಐಡಿಯಿಂದ ಮೆಸೆಜ್ ಬಂದಿದೆ. ಬಳಿಕ ಅರಬೆಲ್ಲಾ ಎಂಬ ಅಕೌಂಟ್ ನಿಂದ ಡ್ರೀಮ್ ಹೊಟೆಲ್ ಗ್ರೂಪ್ ನ ಪ್ರಮೋಟರ್ ಆಗಿ ಕರ್ತವ್ಯ ನಿರ್ವಹಿಸಲು ಸೊಚಿಸಲಾಗಿತ್ತು.

ವೆಬ್ ಸೈಟ್ ನ ಅಡ್ರೆಸ್ ಹಾಗೂ ಅದರ ಐಡಿ ಹಾಗೂ ಪಾಸ್ ವರ್ಡ್ ನೀಡಿದ್ದು, ಅದರಲ್ಲಿನ ಹೊಟೆಲ್ ನ್ನು ಪ್ರಮೋಟ್ ಮಾಡಿ ಮಾಡಿದ ಕೆಲಸಕ್ಕೆ 700 ಕೂಡ ನೀಡಿದ್ದರಂತೆ. ಬಳಿಕ ಇವರಿಗೆ ಕಸ್ಟಮರ್ ಸರ್ವಿಸ್ ಫಾರ್ ಯೂ ಎಂಬ ಟೆಲಿಗ್ರಾಂ ಐಡಿಯಿಂದ 10 ಸಾವಿರ ರೂ. ಹಣ ಹಾಕಲು ತಿಳಿಸಿದ್ದರಿಂದ ಹಣ ಹಾಕಿದ್ದರಂತೆ. ಆ ಬಳಿಕ ಆಗಿದ್ದೇ ಬೇರೆ, ನಿಮಗೆ ಕೆಲಸ ಬೇಕು ಎಂದಾದರೆ, ಹಣ ಹಾಕಿ ಎಂಬ ಸಂದೇಶ ರವಾನೆಯಾಗಿದೆ.

ಈ ವೇಳೆ 15 ಸಾವಿರ, 40 ಸಾವಿರ, 80 ಸಾವಿರ 1 ಲಕ್ಷ ರೂ. ಹಣ ಹೀಗೆ ಬರೋಬ್ಬರಿ 11,57,208 ರೂ. ಹಣ ಪೀಕಿದ್ದು, ಆ ಬಳಿಕವಷ್ಟೇ ಈ ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ಅರಿವಾಗಿದೆ. 

ಜೊತೆಗೆ ತನ್ನ ಖಾತೆಯಲ್ಲಿರುವ 20,86,000 ಹಣ ವಿತ್ ಡ್ರಾ ಮಾಡಲು ಕೂಡ ಶೇ. 30 ರಷ್ಟು ಹಣ ಟ್ಯಾಕ್ಸ್ ಕಟ್ಟಲು ಹೇಳಿದಾಗ ಯುವತಿ ತನ್ನ ಸ್ನೇಹಿತರಿಗೆ ತಿಳಿಸಿದ್ದಾರೆ. ಈ ವೇಳೆ, ಮೋಸ ಮಾಡಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿದಿದೆ.

Leave a Reply

Your email address will not be published. Required fields are marked *