Headlines

ಶಿವಮೊಗ್ಗ ಗ್ಯಾಂಗ್ ವಾರ್ – ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಯಾಸೀನ್ ಖುರೇಷಿ ಅಂತ್ಯಸಂಸ್ಕಾರ | 19 ಆರೋಪಿಗಳ ಬಂಧನ

ಶಿವಮೊಗ್ಗ ಗ್ಯಾಂಗ್ ವಾರ್ – ಬಿಗಿ ಬಂದೋಬಸ್ತ್ ನಲ್ಲಿ ಯಾಸೀನ್ ಖುರೇಷಿ ಅಂತ್ಯಸಂಸ್ಕಾರ | 19 ಆರೋಪಿಗಳ ಬಂಧನ

ಶಿವಮೊಗ್ಗ : ಗ್ಯಾಂಗ್ ವಾರ್ ನಲ್ಲಿ ಮೃತನಾದ ರೌಡಿ ಯಾಸಿನ್ ಖುರೇಷಿ ಅಂತ್ಯ ಸಂಸ್ಕಾರ ಬಿಗಿ ಬಂದೋಬಸ್ತ್ ನಲ್ಲಿ ನಡೆದಿದೆ. 

ಶಿವಮೊಗ್ಗದ ಬಸ್ ನಿಲ್ದಾಣದ ಬಳಿಯ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರ ನಡೆದಿದ್ದು, ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. 

ಶವದ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದೆ ಅಂತ್ಯ ಸಂಸ್ಕಾರ ನೆರವೇರಿತು.

ನಗರದ ಲಷ್ಕರ್ ಮೊಹಲ್ಲಾದಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಎರಡು ಗುಂಪಿನ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬರೋಬ್ಬರಿ 19 ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ಸಂಜೆ ನಡೆದಿದ್ದ ಗ್ಯಾಂಗ್ ವಾರ್‌ ಗಾಯಗೊಂಡಿದ್ದ ರೌಡಿಶೀಟರ್ ಯಾಸಿನ್ ಖುರೇಷಿ ಚಿಕಿತ್ಸೆ ಫಲಿಸದೇ ಗುರುವಾರ ಸಾವನ್ನಪ್ಪಿದ್ದು, ಇದರಿಂದಾಗಿ ಗ್ಯಾಂಗ್ ವಾರ್‌ನಲ್ಲಿ ನಡೆದ ಕೊಲೆಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿತ್ತು.

ಸುಹೈಲ್ ಮತ್ತು ಗೌಸ್ ಹತ್ಯೆ ಮಾಡಿದವರು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಗ್ಯಾಂಗ್ ವಾರ್ ಪ್ರಕರಣದಲ್ಲಿ ಒಟ್ಟು19 ಆರೋಪಿಗಳ ಬಂಧಿಸಲಾಗಿದೆ. ಸುಹೈಲ್ ಮತ್ತು ಗೌಸ್ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಯಾಸಿನ್ ಖುರೇಷಿ ಕಡೆಯ 10 ಹಾಗೂ ಆದಿಲ್ ಗುಂಪಿನ 9 ಜನರ ಬಂಧನ ಮಾಡಲಾಗಿದೆ. 10 ಮಂದಿ ಮೇಲೆ 302 ಹಾಗೂ 9 ಮಂದಿ ಮೇಲೆ 307 ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *