Headlines

Accident | ಟ್ರ್ಯಾಕ್ಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ತಂದೆ ಮಗಳು ಸ್ಥಳದಲ್ಲಿಯೇ ಸಾವು

Accident | ಟ್ರ್ಯಾಕ್ಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ತಂದೆ ಮಗಳು ಸ್ಥಳದಲ್ಲಿಯೇ ಸಾವು



ಶಿಕಾರಿಪುರ ತಾಲ್ಲೂಕಿನ ಹೊನ್ನಾಳಿ ರಸ್ತೆಯ ಸಿದ್ದನಪುರ ಗ್ರಾಮ ಸಮೀಪದ ರಸ್ತೆಯಲ್ಲಿ ಶನಿವಾರ ಕಾರು ಹಾಗೂ ನೀರಿನ ಟ್ಯಾಂಕರ್ ಹೊಂದಿದ್ದ ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಂದೆ- ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪಟ್ಟಣದ ಹಳಿಯೂರು ಹೊಸಕೇರಿ ನಿವಾಸಿ ಸೈಯದ್ ಇಸ್ಮಾಯಿಲ್ ಸಾಬ್ (56) ಹಾಗೂ ಅವರ ಪುತ್ರಿ ಉಮೇ ಹಬೀಬಾ (26) ಮೃತರು. ಸೈಯದ್ ಅವರು ತಮ್ಮ ಮೊಮ್ಮಗಳನ್ನು ತುಮಕೂರಿನಲ್ಲಿರುವ ವಸತಿ ಶಾಲೆಗೆ ಸೇರಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಚಾಲಕ ಸೇರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೃತ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *