ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಅರಸಾಳು – ಬೆನವಳ್ಳಿ ನಡುವಿನ ರಸ್ತೆಯಲ್ಲಿ ನಿನ್ನೆ ರಾತ್ರಿ ಟೊಯೋಟಾ ಇಟಿಯೋಸ್ ಕಾರ್ ಹಾಗೂ ಬಜಾಜ್ ಡಿಸ್ಕವರ್ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಅರಸಾಳು ಗ್ರಾಮದ ನಿವಾಸಿ ಹಾಗೂ ರಿಪ್ಪನ್ ಪೇಟೆ MSIL ಸಂಸ್ಥೆಯ ಉದ್ಯೋಗಿಯಾಗಿದ್ದ ನವೀನ್ (36) ಮೃತಪಟ್ಟಿದ್ದಾರೆ.
ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಟೊಯೋಟಾ ಕಾರು ಹಾಗೂ ರಿಪ್ಪನ್ ಪೇಟೆಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುತಿದ್ದಾಗ ಬೆನವಳ್ಳಿ ಸಮೀಪದಲ್ಲಿ ಈ ದುರ್ಘಟನೆ ನಡೆದಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.