Headlines

ಮಗನಿಗಾಗಿ ಮತ್ತೆ ಜೊತೆಯಾದ ತಂದೆ-ತಾಯಿ

ವಿಚ್ಚೇದನ ಪಡೆಯಲು ಮುಂದಾಗಿದ್ದ ತಂದೆ ಮತ್ತು ತಾಯಿಯನ್ನು ಅವರ 10ನೇ ತರಗತಿಯ ಮಗ ಒಂದು ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ಶಿವಮೊಗ್ಗೆ ಜಿಲ್ಲೆ ಹೊಸನಗರ ತಾಲೂಕಿನ ಕಡೆಗದ್ದೆಯ ನಿವಾಸಿಗಳಾದ ಗಣೇಶಮೂರ್ತಿ ಮತ್ತು ಪೂರ್ಣಿಮಾ ದಂಪತಿ  17 ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು.ಸಣ್ಣದಾದ ಮನಸ್ತಾಪದಿಂದಾಗಿ ಮೂರು ವರ್ಷದ ಹಿಂದೆ ತವರು ಸೇರಿದ್ದ ಪೂರ್ಣಿಮಾ ಮರಳಿ ಗಂಡನ ಮನೆಗೆ ಬಂದಿರಲಿಲ್ಲ.
ಕಳೆದ ಮೂರು ವರ್ಷಗಳಿಂದ ದೂರ ಇದ್ದ ದಂಪತಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇತ್ತ ಈ ದಂಪತಿಗಳ ಪುತ್ರ ಸುಹಾನ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ತಾಯಿ ಇದ್ದರೂ ಅನಾಥ ಮಗುವಿನಂತೆ ಇದ್ದೇನೆ ಎಂದು ತಮ್ಮ ವಕೀಲ ವಾಲೆಮನೆ ಶಿವಕುಮಾರ್ ಮುಂದೆ ಅಳಲು ತೋಡಿಕೊಂಡಿದ್ದನು.
ಶನಿವಾರ ನಗರದ ಹೊಸನಗರದ ಜೆಎಂಎಸ್ ಪಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗಿದೆ.
ಇಲ್ಲಿ ಗಣೇಶಮೂರ್ತಿ ಮತ್ತು ಪೂರ್ಣಿಮಾ ಮತ್ತೆ ಒಂದಾಗಿದ್ದಾರೆ. ನ್ಯಾಯಾಧೀಶರಾದ ಶ್ರೀಮತಿ ಪುಷ್ಪಲತಾ ಹಾಗೂ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಅವರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *