Headlines

ಸಾಗರದ ಎಲ್​ಬಿ ಕಾಲೇಜಿನಲ್ಲಿ ಶಿಮುಲ್​ ಅಧ್ಯಕ್ಷ ಶ್ರೀಪಾದ್​ ಹೆಗೆಡೆ ಮೇಲೆ ಸಾಗರ ಶಾಸಕ ಹರತಾಳು ಹಾಲಪ್ಪ & ಬೆಂಬಲಿಗರಿಂದ ನಡೆಯಿತಾ ಹಲ್ಲೆ!? ಇಲ್ಲಿದೇ ನೋಡಿ ಎಕ್ಸ್ ಕ್ಲೂಸಿವ್ ವೀಡಿಯೋ

ಸಾಗರದ ಎಲ್ ಬಿ ಕಾಲೇಜಿನಲ್ಲಿ ನಡೆಯುತ್ತಿದ್ದ ಜನರಲ್ ಬಾಡಿ ಮೀಟಿಂಗ್ ನಡೆಯುತ್ತಿದ್ದ ಸಂಧರ್ಭದಲ್ಲಿ ಶಾಸಕ ಹರತಾಳು ಹಾಲಪ್ಪ ಹಾಗೂ ಅವರ ಬೆಂಬಲಿಗರು ಅವರ ಮೇಲೆ ಹಲ್ಲೆ ಮಾಡಿದ್ದಾರೆ  ಆರೋಪವನ್ನ ಶ್ರೀಪಾದ್ ಹೆಗೆಡೆಯವರು ಮಾಡಿದ್ದಾರೆ. 
ಶಿಮುಲ್​ ಅಧ್ಯಕ್ಷರಾದ ಶ್ರೀಪಾದ್​ ಹೆಗೆಡೆ ರವರು ಎಲ್​ಬಿ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿದ್ದಾರೆ .ಸದ್ಯ ಅವರು ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವತ್ತು ಎಲ್​ಬಿ ಕಾಲೇಜಿನಲ್ಲಿ ಜನರಲ್​ ಬಾಡಿ ಮೀಟಿಂಗ್​ ನಡೆಸುತ್ತಿದ್ದ ಸಂದರ್ಭದಲ್ಲಿ, ಸ್ಥಳಕ್ಕೆ ಬಂದ ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಅವರ 25 ಕ್ಕೂ ಹೆಚ್ಚು ಬೆಂಬಲಿಗರು ಶ್ರೀಪಾದ್ ಹೆಗೆಡೆ ಹಾಗೂ ಅವರ ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವತಃ ಶ್ರೀಪಾದ್ ಹೆಗೆಡೆ ಆರೋಪಿಸಿದ್ದಾರೆ.
ಈ ಸಂಬಂಧ ಶಾಸಕ ಹರತಾಳು ಹಾಲಪ್ಪನವರು ಇನ್ನಷ್ಟೆ ಪ್ರತಿಕ್ರಿಯೆ ನೀಡಬೇಕಿದೆ. ಇನ್ನೊಂದಡೆ ಶ್ರೀಪಾದ್ ಹೆಗೆಡೆಯವರು ಈ ಸಂಬಂಧ ಸದ್ಯದಲ್ಲಿಯೇ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ಧಾರೆ.
ಇಲ್ಲಿದೇ ನೋಡಿ ಎಕ್ಸ್ ಕ್ಲೂಸಿವ್ ವೀಡಿಯೋ👇👇👇

About The Author

Leave a Reply

Your email address will not be published. Required fields are marked *