Headlines

ಜನಮನ್ನಣೆ ಗಳಿಸಿರುವ ತೀರ್ಥಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸುಧಾಕರ್ ರವರಿಗೆ ಎರಡನೆ ಬಾರಿ ಒಲಿದ ಮುಖ್ಯಮಂತ್ರಿ ಪದಕ

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್  ಸೇವೆ ಸಲ್ಲಿಸುತ್ತಿರುವ ಸುಧಾಕರ್ ಅವರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಮುಖ್ಯಮಂತ್ರಿಗಳ ಪದಕದ ಗೌರವ ಲಭಿಸಿದೆ .ಈ ಪದಕ ಅವರಿಗೆ ಎರಡನೇ ಬಾರಿ ಲಭಿಸುತ್ತಿರುವುದು  ಹೆಮ್ಮೆಯ ವಿಚಾರವಾಗಿದೆ .

ಸುಧಾಕರ್ ರವರು ತೀರ್ಥಹಳ್ಳಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಅನೇಕ ಪ್ರಕರಣಗಳಲ್ಲಿ ಕ್ರಿಮಿನಲ್  ಆರೋಪಿಗಳನ್ನು ಪತ್ತೆ ಹಚ್ಚಲು  ಹೆಚ್ಚಿನ ಶ್ರಮವಹಿಸಿದವರಾಗಿದ್ದಾರೆ .ತೀರ್ಥಹಳ್ಳಿಯ  ವ್ಯಾಪ್ತಿಯ ಹತ್ತಾರು ಗಂಭೀರವಾದ ಕ್ರೈಮ್  ಪ್ರಕರಣಗಳಲ್ಲಿ ಕ್ಷಣಮಾತ್ರದಲ್ಲಿ ವಿಷಯವನ್ನು ಸಂಗ್ರಹಿಸಿ ತನಿಖೆಗೆ ಸಹಕರಿಸುವ ವಂತಾಗಲು ,ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಇವರ ಪಾತ್ರ ಅತಿಮುಖ್ಯವಾಗಿತ್ತು .


ಜನರೊಂದಿಗೆ ಪ್ರೀತಿ ವಿಶ್ವಾಸ ಗೌರವದಿಂದ ಸೇವೆ ಸಲ್ಲಿಸುತ್ತಿರುವ  ಇವರು ವ್ಯಾಪ್ತಿಯಲ್ಲಿ  ಕ್ರಿಮಿನಲ್ ಗಳಿಗೆ ಕಾನೂನಿನ ಮತ್ತು ಪೊಲೀಸ್ ಇಲಾಖೆಯ ಬಗ್ಗೆ ಎಚ್ಚರಿಕೆ ಮತ್ತು ಜನಸೇವೆ ,ಜನಸ್ನೇಹಿ  ಪೋಲಿಸ್ ಎಂದು ಗುರುತಿಸಿಕೊಂಡಿದ್ದು, ಹಿರಿಯ ಅಧಿಕಾರಿಗಳಿಗೆ  ಮತ್ತು ಇಲಾಖೆ ಅನೇಕ ಮಾಹಿತಿಗಳನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತಿರುವ ಪೊಲೀಸ್ ಸಿಬ್ಬಂದಿ ಇವರಾಗಿದ್ದಾರೆಂದು  ಹೇಳಿದರೆ ತಪ್ಪಾಗಲಾರದು . ಇವರ ಪತ್ನಿಯೂ ಸಹ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಜನಸೇವೆಮನ್ನಣೆ ಗಳಿಸಿರುವ ಪೋಲಿಸ್ ಅಧಿಕಾರಿಯಾಗಿದ್ದು ಹೆಡ್ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ .ಇವರಿಗೆ ತೀರ್ಥಹಳ್ಳಿಯ ನಾಗರಿಕರು ,ಇಲಾಖೆಯ ಸಿಬ್ಬಂದಿಗಳು, ಡಿವೈಎಸ್ಪಿ,, ಸರ್ಕಲ್ ಇನ್ ಸ್ಪೆಕ್ಟರ್ ,ತೀರ್ಥಹಳ್ಳಿ  ಠಾಣಾಧಿಕಾರಿಗಳು ಮತ್ತು ಸಬ್ ಇನ್ ಸ್ಪೆಕ್ಟರ್ ಗಳು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ .

ಸುಧಾಕರ್ ರವರು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲವು ವರ್ಷ ಕಾರ್ಯ ನಿರ್ವಹಿಸಿ ಪಟ್ಟಣದಾದ್ಯಂತ ಜನಮನ್ನಣೆ ಗಳಿಸಿದ್ದಾರೆ.

ಎರಡನೆ ಬಾರಿ ಮುಖ್ಯಮಂತ್ರಿ ಪದಕ ಪಡೆದ ಸುಧಾಕರ್ ರವರಿಗೆ ಪೋಸ್ಟ್ ಮ್ಯಾನ್ ನ್ಯೂಸ್ ಬಳಗದಿಂದ ಅಭಿನಂದನೆಗಳು. ನಿಮ್ಮ ಸೇವೆ ಹೀಗೆ ಮುಂದುವರೆಯಲಿ……

Leave a Reply

Your email address will not be published. Required fields are marked *