ಇಂದು ರಿಪ್ಪನ್ ಪೇಟೆ ಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಅಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಶೇಕಡ 40ರಷ್ಟು ಕಮಿಷನ್ ಬೇಡಿಕೆ ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಮುನ್ನ ತನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು. ಸಂತೋಷ್ ಸಾವಿಗೆ ಈಶ್ವರಪ್ಪ ಕಾರಣರಾಗಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಬೇಕು ಎಂದು ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಈಗಾಗಲೇ ರಾಜ್ಯಾದ್ಯಂತೆ ಪ್ರತಿಭಟನೆಗಳು ನಡೆಯುತ್ತಿದ್ದು ಈ ಕೂಡಲೇ ಅವರನ್ನು ಬಂಧಿಸಬೇಕು ಎಂದು ಹೇಳಿದರು.
ಧರ್ಮದ ಹೆಸರಿನಲ್ಲಿ ರಾಜಕೀಯ ಬೇಡ:
ಕೆಲವು ದಿನಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರೆಮಾಚಿದೆ. ಬಿಜೆಪಿ ಪಕ್ಷಗಳ ತತ್ವ-ಸಿದ್ಧಾಂತಗಳು ಮತ್ತು ತಮ್ಮ ವ್ಯಕ್ತಿಗತ ಶಕ್ತಿಗಾಗಿ ಸಾಮಾನ್ಯ ಜನ ಬದುಕನ್ನು ಬಲಿ ನೀಡಲಾಗುತ್ತದೆ ಅವತ್ತಿನ ದಿನ ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟ ನಮ್ಮ ಭಾರತದೇಶ ಎಂದು ಹೇಳಿದ್ದರು ಇಂದಿನ ಸಮಾಜದ ಮಠ-ಮಂದಿರಗಳಲ್ಲಿ ಶಾಂತಿ ನಿಲ್ಲಿಸಿದೆ ರಾಜಕೀಯ ಆಗುಹೋಗುಗಳ ಆರಂಭಿಕ ಕೇಂದ್ರಗಳಾಗಿ ಮಾರ್ಪಟ್ಟಿವೆ ಕೊಟ್ಟರೆ ರಾಜಕಾರಣಿಗಳು ಜಾತಿ ಎಂಬ ವಿಷಯವನ್ನು ಬಿತ್ತಿ ಸಮಾಜವನ್ನು ಮರಳು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾರುಗಳು ನಡೆಯುತ್ತಿವೆ ಜನರು ಇದನ್ನು ಸೂಕ್ಷ್ಮವಾಗಿ ಅವಲೋಕಿಸಿ ಬರುವಂತ ಚುನಾವಣೆಗಳಲ್ಲಿ ಮತಗಳಿಂದ ಮೂಲಕ ತಕ್ಕ ಪಾಠ ಕಲಿಸಬೇಕಿದೆ ಎಂದರು.