Headlines

ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಫಲಶ್ರುತಿ : ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರೀಕರ ಕಂದಾಯ ಪಾವತಿ ಸಮಸ್ಯೆಗೆ ಮುಕ್ತಿ

ಪಟ್ಟಣ ಪಂಚಾಯತಿ ತೀರ್ಥಹಳ್ಳಿಯವರಿಂದ  ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆಗಳ ಬಗ್ಗೆ ನಿನ್ನೆ ಸಂಜೆಯ ವೇಳೆ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ವರದಿ ಪ್ರಕಟಿಸಲಾಗಿತ್ತು. ನೀರಿನ ಬಿಲ್ಲಿನ ಸಮಸ್ಯೆಗಳು ಹಾಗೂ ಕಂದಾಯ ಕಟ್ಟಿಸಿಕೊಳ್ಳುವ ಬಗ್ಗೆ ವರದಿ ಬಿತ್ತರಿಸಲಾಗಿತ್ತು.

ಈ ವರದಿಗೆ ತಕ್ಷಣವೇ ಸ್ಪಂದಿಸಿರುವ ಅಧಿಕಾರಿಗಳು ಇಂದಿನಿಂದ ಕಂದಾಯವನ್ನು ಕಟ್ಟಿಸಿಕೊಳ್ಳುವುದರ ಜೊತೆ 5% ರಿಯಾಯಿತಿ ಸಹ ಘೋಷಿಸಿದ್ದಾರೆ.ಈ ಬಗ್ಗೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ವಾಹನಗಳಲ್ಲಿ ಅನೌನ್ಸ್ ಮಾಡಲಾಗುತ್ತಿದೆ.

 ಇದರಿಂದಾಗಿ ಸಾರ್ವಜನಿಕರು ಪೋಸ್ಟ್ ಮ್ಯಾನ್ ನ್ಯೂಸ್ ಮಾಧ್ಯಮ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.





Leave a Reply

Your email address will not be published. Required fields are marked *