ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೋಡೂರಿನ ಕೀಳಂಬಿ ರಸ್ತೆಯಲ್ಲಿರುವ ಮೂಲಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ಬಿಲ್ ವಿಚಾರದಲ್ಲಿ ಮಾರಾಮಾರಿ ಗಲಾಟೆ ನಡೆದು ಬಾರ್ ರಕ್ತಸಿಕ್ತವಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ರಿಪ್ಪನ್‌ಪೇಟೆ ಸಮೀಪದ ಬಿಳಿಕಿ ಗ್ರಾಮದ ಕ್ರಾಂತಿ ಮತ್ತು ಸುದರ್ಶನ್ ಮೇಲೆ ಪ್ರಕರಣ ದಾಖಲಾಗಿದೆ.
ಮದ್ಯ ಸೇವಿಸಲು ಬಾರ್ ಗೆ ಬಂದಿದ್ದ ಇಬ್ಬರು ಮದ್ಯ ಸೇವಿಸಿದ್ದಾರೆ.ನಂತರ ಬಿಲ್ ಪಾವತಿಸುವ ವೇಳೆಯಲ್ಲಿ ಕ್ಯಾಷಿಯರ್ ಜೊತೆ ಮಾತಿಗೆ ಮಾತು ನಡೆದು ಗಲಾಟೆ ಪ್ರಾರಂಭವಾಗಿದೆ.
ಗಲಾಟೆಯಲ್ಲಿ ಮದ್ಯದ ಬಾಟಲಿಗಳನ್ನು ಒಡೆದು, ಬಾಗಿಲಿಗೆ ಹಾನಿ ಉಂಟು ಮಾಡಿದ್ದಾರೆ, ಇದರಿಂದ 40 ಸಾವಿರ ರೂ. ನಷ್ಟವಾಗಿದೆ ಇದರಿಂದ 40 ಸಾವಿರ ರೂ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಗಲಾಟೆಯ ಭೀಕರತೆ ಎಷ್ಟಿತ್ತು ಎಂದರೆ ಬಾರ್ ತುಂಬಾ ರಕ್ತಸಿಕ್ತವಾಗಿದ್ದು,ಬಾಗಿಲು ಮುರಿದಿದ್ದು ನೆಲಕ್ಕೆ ಹಾಸಿದ್ದ ಟೈಲ್ಸ್ ಕೂಡಾ ಪುಡಿಪುಡಿಯಾಗಿದೆ.
ಘಟನೆಯಲ್ಲಿ ದೇವರಾಜ್ ಮತ್ತು ಷಣ್ಮುಖನಿಗೆ ತಲೆಗೆ ಗಾಯವಾಗಿದ್ದರಿಂದ ಚಿಕಿತ್ಸೆಗಾಗಿ ಸ್ಥಳೀಯರು ಖಾಸಗಿ ವಾಹನದಲ್ಲಿ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ 108ರ ಅಂಬುಲೆನ್ಸ್ ವಾಹನದಲ್ಲಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.