Headlines

ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮಗು ಕೆರೆಯಲ್ಲಿ ಶವವಾಗಿ ಪತ್ತೆ|death

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮಗು ಇಂದು ಮನೆಯ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಮನೆಯ ಬಳಿ ಆಟವಾಡುತಿದ್ದ ಮಗು ಕಾಣೆಯಾಗಿತ್ತು,ಎಲ್ಲಾ ಕಡೆ ವಿಚಾರಿಸಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ಅವರ ತಂದೆ ದೂರು ಸಲ್ಲಿಸಿದ್ದರು. ಇಂದು ಮಗುವಿನ ಮೃತ ದೇಹ ಮನೆಯ ಸಮೀಪದ ಕೆರೆಯಲ್ಲಿ ತೇಲಿ ಬಂದಿದೆ.

ರಾಗಿಗುಡ್ಡದ 7 ನೇ ತಿರುವಿನಲ್ಲಿ ಮಹ್ಮದ್ ಸೂಫಿಯನ್ ಖುರೇಷಿ ಎಂಬುವರು ತಮ್ಮ ಮೊದಲನೇ ಮಗು ಮೊಹ್ಮದ್ ಮನ್ನನ್ ಖುರೇಷಿ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಫೆ.11 ರಂದು ಮನೆಯ ಬಳಿ ಆಡುತ್ತಿದ್ದ ಮನ್ನನ್ ಖುರೇಷಿ ಮಧ್ಯಾಹ್ನದ ವೇಳೆ ದಿಡೀರನೇ ನಾಪತ್ತೆಯಾಗಿದ್ದನು.



ಇಂದು ಬೆಳಿಗ್ಗೆ ರಾಗಿಗುಡ್ಡದ ಕೆರೆಯಲ್ಲಿ ಮಗುವಿನ ಶವ ತೇಲಿ ಬಂದಿದೆ. ಇದನ್ನ ಕಂಡ ಸ್ಥಳೀಯರು ಮಗುವಿನ ಕುಟುಂಬಕ್ಕೆ ಮಾಹಿತಿ ತಿಳಿಸಿದ್ದಾರೆ

ಮನೆಯ ಸಮೀಪವಿರುವ ಕೆರೆಯಲ್ಲಿ ಆಟವಾಡಲು ಹೋಗಿ ನೀರಲ್ಲಿ ಮುಳುಗಿ  ಮಗು ಸಾವನ್ನಪ್ಪಿರಬಹದು ಎಂದು ಅಂದಾಜಿಸಲಾಗಿದೆ.‌ 



ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

About The Author

Leave a Reply

Your email address will not be published. Required fields are marked *