ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವುಣೆ ಗ್ರಾಮದ ಶ್ರೀ ಕಲಾನಾಥೇಶ್ವರ ದೇವಸ್ಥಾನ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಕಳ್ಳರು ರಾತ್ರಿಯ ವೇಳೆಯಲ್ಲಿ ದೇವಸ್ಥಾನದ ಮುಂಭಾಗಿಲಿನ ಬೀಗ ಮುರಿದು ದೇವಸ್ಥಾನದ ಒಳಭಾಗಕ್ಕೆ ಪ್ರವೇಶಿಸಿ ದೇವರ ಮುಂಭಾಗದಲಿದ್ದ ಒಂದು ಕಬ್ಬಿಣದ ಮತ್ತು ಸ್ಟೀಲ್ ನ ಕಾಣಿಕೆ ಡಬ್ಬಿಗಳನ್ನು ದೇವಸ್ಥಾನದ ಹೊರಭಾಗ ಎತ್ತಿಕೊಂಡು ಹೋಗಿ ಅಲ್ಲಿ ಅವುಗಳ ಬೀಗವನ್ನು ಮುರಿದು ಅದರ ಒಳಭಾಗದಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಕಾಣಿಕೆ ಡಬ್ಬಿಗಳು ಹಾಗೂ ಮುರಿದ ಬೀಗಗಳನ್ನು ಅಲ್ಲಿಯೇ ಬಿಸಾಡಿ ಹೋಗಿದ್ದಾರೆ.
ಶನಿವಾರ ಬೆಳಿಗ್ಗೆ 7-00 ಗಂಟೆಗೆ ಅರ್ಚಕ ಪಾಂಡುರಂಗ ಪೂಜೆಗೆ ಹೋದಾಗ ದೇವಸ್ಥಾನದ ಮುಂಬಾಗಿಲು ತೆರೆದಿತ್ತು.ಕೂಡಲೇ ಗಾಬರಿಯಿಂದ ದೇವಸ್ಥಾನದ ಸಮಿತಿಯವರಿಗೆ ಮಾಹಿತಿ ತಿಳಿಸಿದ್ದಾರೆ.ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.