POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು | Accident

ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು | Accident

ಶಿವಮೊಗ್ಗ : ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಬೈ ಕ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಊರುಗಡೂರು ಸರ್ಕಲ್‌ ಬಳಿ ಬಸ್‌ವೊಂದಕ್ಕೆ ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಬಸ್‌ನ ಅಡಿಗೆ ಬಿದ್ದ ಪರಿಣಾಮ ಸವಾರ ಅಲ್ಲಿಯೇ ಸಾವನ್ನಪ್ಪಿದ್ದಾನೆ. 

ಮೃತ ವ್ಯಕ್ತಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ರಾಜಹಂಸ ಬಸ್‌ ಶಿವಮೊಗ್ಗಕ್ಕೆ ಬರುತ್ತಿತ್ತು. ಸಿಟಿ ಹೊರಗಡೆಯಿಂದ ಶಿವಮೊಗ್ಗಕ್ಕೆ ಬರಬೇಕಾದ್ದರಿಂದ ಎಂಆರ್‌ಎಸ್‌ ಸರ್ಕಲ್‌ನಲ್ಲಿ ಟರ್ನ್‌ ತೆಗೆದುಕೊಂಡ ಬಸ್‌ ಅಲ್ಲಿಂದ ಮಂಡ್ಲಿ ಸರ್ಕಲ್‌ ಕಡೆಗೆ ಬರುತ್ತಿತ್ತು. ಈ ವೇಳೆ ಊರುಗಡೂರು ಸರ್ಕಲ್‌ ಬಳಿಯಲ್ಲಿ ಬೈಕ್‌ಗೆ ಡಿಕ್ಕಿಯಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಬೈಕ್‌ ಡಿಕ್ಕಿಯಾದ ಬಸ್‌ ಅಲ್ಲಿದ್ದ ಪುಟ್‌ಪಾತ್‌ ಹತ್ತಿದೆ. ಜೊತೆಯಲ್ಲಿ ಬೈಕ್‌ ಸವಾರನನ್ನೂ ಎಳೆದೊಯ್ದಿದೆ. ಪರಿಣಾಮ  ಬೈಕ್‌ ಸವಾರ ಸಂತೋಷ್‌ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಈ ಸಂಬಂದ ಪಶ್ಚಿಮ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.