ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ವಡಾಹೊಸಳ್ಳಿ ಗ್ರಾಮದಲ್ಲಿ ಕೋಳಿ ಮೊಟ್ಟೆಯನ್ನು ತಿನ್ನಲು ಹೋದ ನಾಗರಹಾವು ಕೋಳಿ ಗೂಡಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ವಡಾಹೊಸಳ್ಳಿ ಅಂಗನವಾಡಿ ಕಾರ್ಯಕರ್ತೆ ಸುಶೀಲ ಎಂಬುವವರ ಮನೆಯ ಕೋಳಿಗೂಡಿನಲ್ಲಿ ಮೊಟ್ಟೆ ತಿನ್ನಲು ಹೋಗಿ ನಾಗರಹಾವೊಂದು ಗೂಡಿನಲ್ಲಿ ಬಂಧಿಯಾಗಿತ್ತು, ಕೋಳಿಗೂಡಿನಲ್ಲಿ ಮೊಟ್ಟೆ ತಿಂದು ಗೂಡಿನಲ್ಲಿ ಹೆಡೆ ಬಿಚ್ಚಿ ಆಟವಾಡುತ್ತಿರುವ ನಾಗರಹಾವನ್ನು ಕಂಡ ಮನೆಯವರು ತಕ್ಷಣ ರಿಪ್ಪನ್‌ಪೇಟೆಯ ಉರಗ ತಜ್ಞ ಗಂಗಾಧರ(ಗಂಗಣ್ಣ) ರವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ಉರಗತಜ್ಞ ಗಂಗಾಧರ್ ಸ್ಥಳಕ್ಕೆ ತೆರಳಿ ಕೋಳಿ ಗೂಡಿನಲ್ಲಿ ಬಂಧಿಯಾಗಿದ್ದ ನಾಗರಹಾವನ್ನು ರಕ್ಷಿಸಿದರು.ನಂತರ ಹಾವನ್ನು ಸಮೀಪದ ಕಾಡಿಗೆ ಬಿಡಲಾಯಿತು.