ಹುಲ್ಲಿನ ಪಿಂಡಿ ಕಟ್ಟುವ ಯಂತ್ರಕ್ಕೆ ಸಿಲುಕಿ ಯುವಕ ಸಾವು
ಶಿವಮೊಗ್ಗದ ಬೈಪಾಸ್ ನಲ್ಲಿರುವ ಟೊಯೋಟಾ ಶೋರೂಂ ಹಿಂಭಾಗದಲ್ಲಿನ ಭತ್ತದ ಜಮೀನಿನಲ್ಲಿ ಹುಲ್ಲಿನ ಪಿಂಡಿ ಕಟ್ಟುವ ಮಿಷನ್ ಗೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ.
ಟೊಯೋಟಾ ಶೋರೂಂ ಹಿಂಭಾಗದ ವಡ್ಡಿನಕೊಪ್ಪದ ಉಜ್ಜಿನಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ತಮಿಳುನಾಡಿನಿಂದ ಬಂದಿದ್ದ ಸೂರ್ಯ ಎಂಬ ಯುವಕ ಹುಲ್ಲಿನ ಪಿಂಡಿ ಕಟ್ಟುವ ಮಿಷಿನ್ ಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಹುಲ್ಲಿನ ಪಿಂಡಿ ಕಟ್ಟುವ ಮಿಷನ್ ನೊಂದಿಗೆ ತಮಿಳುನಾಡಿನಿಂದ ಬಂದಿದ್ದ ಸೂರ್ಯ ಎಂಬುವನು ಜಮೀನಿನಲ್ಲಿ ಕೆಲಸ ಮಾಡುವಾಗ ಹುಲ್ಲಿನ ಪಿಂಡಿ ಕಟ್ಟುವ ಮಿಷಿನ್ ಅರ್ಧಕ್ಕೆ ನಿಂತಿತ್ತು.ಮಿಷಿನ್ ಒಳಗೆ ಇಣುಕಿ ಸಿಲುಕಿಕೊಂಡ ಹುಲ್ಲುಗಳನ್ನ ಬಿಡಿಸುವಾಗ ಆತನ ಕುತ್ತಿಗೆ ಭಾಗ ಮಿಷಿನ್ ಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಪ್ರಕರಣ ಇಂದು ಸಂಜೆ ನಡೆದಿದೆ.
ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.