ಶಿವಮೊಗ್ಗ : ಕೊಲೆ ಯತ್ನ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ ಮಾಡಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ದೊಡ್ಡದಾನವಂದಿ ಅರಣ್ಯದ ಬಳಿ ನಡೆದಿದೆ.
ಮಾರ್ಕೆಟ್ ಫೌಜನ್ ಗ್ಯಾಂಗ್ನ ಸದಸ್ಯನಾಗಿರುವ ರೌಡಿಶೀಟರ್ ಸೈಫುಲ್ಲಾ ಖಾನ್ ಅಲಿಯಾಸ್ ಸೈಫುಗೆ ಜಯನಗರ ಠಾಣೆ ಪಿಎಸ್ಐ ನವೀನ್ರಿಂದ ಫೈರಿಂಗ್ ಮಾಡಲಾಗಿದೆ.
ಕೊಲೆ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದಾಗ ಕಾನ್ಸ್ಟೇಬಲ್ ನಾಗರಾಜ್ ಮೇಲೆ ಸೈಫುಲ್ಲಾ ಖಾನ್ನಿಂದ ಹಲ್ಲೆ ಮಾಡಲಾಗಿದೆ. ಆತ್ಮರಕ್ಷಣೆಗಾಗಿ ಸೈಫು ಕಾಲಿಗೆ ಗುಂಡು ಹಾರಿಸಲಾಗಿದೆ.
ಸದ್ಯ ಗಾಯಾಳು ಸೈಫುಲ್ಲಾ ಸೇರಿದಂತೆ ಪೊಲೀಸರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ತುಂಗಾನಗರ, ಜಯನಗರ ಠಾಣೆ ಸೇರಿದಂತೆ ದೊಡ್ಡಪೇಟೆ ಠಾಣೆಯೊಂದರಲ್ಲೇ ಸೈಫು ವಿರುದ್ಧ 16 ಕೇಸ್ ದಾಖಲಾಗಿವೆ.