ಬಾಳೂರು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ – ಅಧ್ಯಕ್ಷರಾಗಿ ಶ್ರೀನಿವಾಸ್ ಆಚಾರ್ ಉಪಾಧ್ಯಕ್ಷರಾಗಿ ವೇದಾವತಿ ಬಾಲಚಂದ್ರ ಆಯ್ಕೆ|baluru

ಬಾಳೂರು ಗ್ರಾ.ಪಂ.ಅಧ್ಯಕ್ಷರಾಗಿ ಶ್ರೀನಿವಾಸ್ ಆಚಾರ್ ಉಪಾಧ್ಯಕ್ಷರಾಗಿ ವೇದಾವತಿ ಬಾಲಚಂದ್ರ ಆಯ್ಕೆ
ರಿಪ್ಪನ್‌ಪೇಟೆ;-ಸಮೀಪದ ಬಾಳೂರು ಗ್ರಾಮ ಪಂಚಾಯತಿ ಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷೆ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶ್ರೀನಿವಾಸ್ ಆಚಾರ್ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವೇದಾವತಿ ಬಾಲಚಂದ್ರ ಆಯ್ಕೆಯಾಗಿದ್ದಾರೆ.ಈ ಮೂಲಕ ಮತ್ತೊಂದು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

9 ಸದಸ್ಯರನ್ನು ಹೊಂದಿರುವ  ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಶ್ರೀನಿವಾಸ್ ಆಚಾರ್ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ವೇದಾವತಿ ಬಾಲಚಂದ್ರ ಕ್ರಮವಾಗಿ 6 ಮತಗಳನ್ನು ಪಡೆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 3 ಮತ ಪಡೆದಿದ್ದಾರೆ.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್, ಬಿ ಪಿ ರಾಮಚಂದ್ರ ,ಈಶ್ವರಪ್ಪ ಗೌಡ,ಎಂ ಎಂ ಪರಮೇಶ್, ಗೋಪಾಲಕೃಷ್ಣ ,ರಮೇಶ್ ಫ್ಯಾನ್ಸಿ ಹಾಗೂ ಇನ್ನಿತರರು ಶುಭಾಶಯ ಕೋರಿದರು.

Leave a Reply

Your email address will not be published. Required fields are marked *