ವಿದ್ಯುತ್ ತಂತಿ ತಗುಲಿ 13 ವರ್ಷದ ಕಾಡಾನೆ ಸಾವು; ಇಬ್ಬರು ತೋಟದ ಮಾಲೀಕರು ವಶಕ್ಕೆ! | A 13-year-old wild elephant died after coming into contact with an electric fence near Ichawadi, Basavapura, Shivamogga. Forest officials have detained two plantation owners for investigation.
ಶಿವಮೊಗ್ಗ: ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಸುಮಾರು 13 ವರ್ಷದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಶಿವಮೊಗ್ಗದ ಬಸವಾಪುರ ಸಮೀಪದ ಈಚಲವಾಡಿ ಕಾಡಂಚಿನಲ್ಲಿ ನಡೆದಿದೆ.
ಪ್ರಾಣಿಗಳು ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಬಾರದೆಂಬ ಉದ್ದೇಶದಿಂದ ತೋಟದ ಮಾಲೀಕರು ವಿದ್ಯುತ್ ತಂತಿ ಅಳವಡಿಸಿದ್ದರು ಎನ್ನಲಾಗಿದೆ. ಇದೇ ವಿದ್ಯುತ್ ತಂತಿ ತಗುಲಿ 13 ವರ್ಷದ ಕಾಡಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ವಿದ್ಯುತ್ ತಂತಿ ಅಳವಡಿಸಿದ ಆರೋಪದ ಮೇಲೆ ಇಬ್ಬರು ತೋಟದ ಮಾಲೀಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಕಾಡಾನೆಯ ಸಾವಿಗೆ ಕಾರಣವಾದ ವಿದ್ಯುತ್ ಸಂಪರ್ಕ ಹಾಗೂ ತಂತಿ ಅಳವಡಿಕೆ ಕುರಿತು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಕಾಡಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸುವುದರಿಂದ ವನ್ಯಜೀವಿಗಳ ಜೀವಕ್ಕೆ ಅಪಾಯ ಎದುರಾಗುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮುಂದಿನ ಕ್ರಮ ಹಾಗೂ ತನಿಖೆಯ ವರದಿ ಕುತೂಹಲ ಮೂಡಿಸಿದೆ.
