ಸಾವಿರಾರು ರೂ. ಮೌಲ್ಯದ 600 ಗ್ರಾಂ ಗಾಂಜಾ ವಶ: ಆರೋಪಿ ಬಂಧನ | Police in Bhadravathi arrested a 32-year-old man for allegedly selling cannabis in Sathya Sai Nagar and seized 600 grams of ganja worth approximately ₹30,000.
ಭದ್ರಾವತಿ: ನಗರದ ಸತ್ಯಸಾಯಿನಗರ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಭದ್ರಾವತಿ ಪೊಲೀಸ್ ಠಾಣೆಯ ಪಿಎಸ್ಐ ಭಾರತಿ ಎಸ್.ಎನ್. ಹಾಗೂ ಸಿಬ್ಬಂದಿ ತಂಡವು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದೆ. ಈ ವೇಳೆ ನೇತಾಜಿ ರಸ್ತೆ, 2ನೇ ಕ್ರಾಸ್, ಸೀಗೆಬಾಗಿ ನಿವಾಸಿ ಅಜಗರ್ ಅಲಿ ಅಲಿಯಾಸ್ ರಾಯಿಲ್ (32) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಯಿಂದ ಸುಮಾರು 30,000 ರೂ. ಮೌಲ್ಯದ 600 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
