Headlines

ಗಣೇಶೋತ್ಸವದ ಸಂಭ್ರಮದ ನಡುವೆ ದುರಂತ; ವಿದ್ಯಾರ್ಥಿ ನೀರುಪಾಲು

Screenshot 2026 09 21 17 22 04 664 com.openai.chatgpt edit

ಗಣೇಶ ವಿಸರ್ಜನೆ ವೇಳೆ ಕೆರೆಗೆ ಇಳಿದ ಪದವಿ ವಿದ್ಯಾರ್ಥಿ ನೀರುಪಾಲು | A degree student died after drowning in a lake during Ganesh idol immersion near Devarahalli in Bhadravati taluk, Shivamogga district.

ಭದ್ರಾವತಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಗೆ ಇಳಿದಿದ್ದ ಪದವಿ ವಿದ್ಯಾರ್ಥಿಯೊಬ್ಬರು ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ ತಾಲೂಕಿನ ದೇವರಹಳ್ಳಿ ಸಮೀಪ ನಡೆದಿದೆ.

ಮೃತರನ್ನು ರಂಗನಾಥಪುರ (ಗುಂಡಪ್ಪ ಕ್ಯಾಂಪ್) ನಿವಾಸಿ ಗೋಪಾಲ್ ಅವರ ಪುತ್ರ ರಾಕೇಶ್ ಎಂದು ಗುರುತಿಸಲಾಗಿದೆ.

ರಂಗನಾಥಪುರದ ಗಣೇಶ ಮೂರ್ತಿಯನ್ನು ಚೌಡೇಶ್ವರಿ ದೇವಸ್ಥಾನದ ಸಮೀಪದ ಕೆರೆಯಲ್ಲಿ ವಿಸರ್ಜಿಸಲು ಭಕ್ತರು ತೆರಳಿದ್ದರು. ಈ ವೇಳೆ ಮೂರ್ತಿ ವಿಸರ್ಜನೆಗಾಗಿ ರಾಕೇಶ್ ಕೆರೆಗೆ ಇಳಿದಿದ್ದರು. ಮೂರ್ತಿ ವಾಲಿದ ಸಂದರ್ಭದಲ್ಲಿ ಆಯತಪ್ಪಿದ ಅವರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ರಾತ್ರಿ ಸುಮಾರು 2 ಗಂಟೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬಳಿಕ ಬೆಳಗ್ಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೇತೃತ್ವದ ತಂಡವೂ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿತು. ಸತತ ಕಾರ್ಯಾಚರಣೆಯ ಬಳಿಕ ರಾಕೇಶ್ ಅವರ ಮೃತದೇಹವನ್ನು ಪತ್ತೆಹಚ್ಚಿ ಕೆರೆಯಿಂದ ಹೊರ ತೆಗೆಯಲಾಯಿತು.

ಈ ಘಟನೆ ಕುರಿತು ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.