ಕೊನೆಯ ಕ್ಷಣದ ಕಮ್ಬ್ಯಾಕ್! ಇಂಗ್ಲೆಂಡ್ ವಿರುದ್ಧ 2-1 ಜಯ ಸಾಧಿಸಿ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟ ಅರ್ಜೆಂಟಿನಾ
Argentina defeated England 2-1 in a dramatic FIFA World Cup 2026 semifinal with late goals from Enzo Fernandez and Lautaro Martinez to book a place in the final against Spain.
ಅಟ್ಲಾಂಟಾ, ಜು.16: 2026ರ ಫಿಫಾ ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟಿನಾ ತಂಡವು ಕೊನೆಯ ಕ್ಷಣಗಳಲ್ಲಿ ಅದ್ಭುತ ಕಮ್ಬ್ಯಾಕ್ ಪ್ರದರ್ಶಿಸಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ರೋಚಕ ಜಯ ದಾಖಲಿಸಿದೆ.
ಅಟ್ಲಾಂಟಾದ ಮರ್ಸಿಡಿಸ್-ಬೆನ್ಜ್ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಸೆಣಸಾಟದಲ್ಲಿ ಗೆಲುವು ಸಾಧಿಸಿದ ಅರ್ಜೆಂಟಿನಾ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಎಚ್ಚರಿಕೆಯ ಆಟ ಪ್ರದರ್ಶಿಸಿದ ಪರಿಣಾಮ ಯಾವುದೇ ಗೋಲು ದಾಖಲಾಗದೆ 0-0 ಸಮಬಲದಲ್ಲಿ ವಿರಾಮಕ್ಕೆ ತೆರಳಿದವು.
ಎರಡನೇ ಇನ್ನಿಂಗ್ಸ್ ಆರಂಭವಾದ ಕೆಲವೇ ಕ್ಷಣಗಳಲ್ಲಿ, 55ನೇ ನಿಮಿಷದಲ್ಲಿ ಇಂಗ್ಲೆಂಡ್ನ ಆ್ಯಂಥೊನಿ ಗಾರ್ಡನ್ ಗೋಲು ದಾಖಲಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಈ ಗೋಲಿನ ಬಳಿಕ ಇಂಗ್ಲೆಂಡ್ ಪಂದ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆಸಿತು.
ಆದರೆ ಪಂದ್ಯದ ಕೊನೆಯ ಹಂತದಲ್ಲಿ ಅರ್ಜೆಂಟಿನಾ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. 85ನೇ ನಿಮಿಷದಲ್ಲಿ ಲಿಯೊನೆಲ್ ಮೆಸ್ಸಿ ನೀಡಿದ ನಿಖರ ಪಾಸ್ ಅನ್ನು ಎನ್ಝೋ ಫೆರ್ನಾಂಡೀಸ್ ಗೋಲಾಗಿ ಪರಿವರ್ತಿಸಿ 1-1 ಸಮಬಲ ಸಾಧಿಸಿದರು.
ಇಂಜುರಿ ಟೈಮ್ನ 90+2ನೇ ನಿಮಿಷದಲ್ಲಿ ಬದಲಿ ಆಟಗಾರ ಲೌಟಾರೋ ಮಾರ್ಟಿನೆಜ್ ನಿರ್ಣಾಯಕ ಗೋಲು ಬಾರಿಸಿ ಅರ್ಜೆಂಟಿನಾಗೆ 2-1 ಅಂತರದ ಅಮೋಘ ಗೆಲುವು ತಂದುಕೊಟ್ಟರು. ಕೊನೆಯ ಕ್ಷಣದ ಈ ಗೋಲು ಇಂಗ್ಲೆಂಡ್ನ ವಿಶ್ವಕಪ್ ಕನಸಿಗೆ ತೆರೆ ಎಳೆದರೆ, ಅರ್ಜೆಂಟಿನಾವನ್ನು ಮತ್ತೊಮ್ಮೆ ಫೈನಲ್ ವೇದಿಕೆಗೆ ಕೊಂಡೊಯ್ದಿತು.
ಈ ಜಯದೊಂದಿಗೆ ಅರ್ಜೆಂಟಿನಾ ಜುಲೈ 19ರಂದು ನಡೆಯಲಿರುವ ವಿಶ್ವಕಪ್ ಮಹಾಫೈನಲ್ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ವಿಶ್ವ ಫುಟ್ಬಾಲ್ ಅಭಿಮಾನಿಗಳು ಈಗ ಈ ಮಹಾಮುಖಾಮುಖಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.