ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿಯ ಆನೆಗದ್ದೆಯಲ್ಲಿ ಲೈಟ್ ಕಂಬಕ್ಕೆ ವಿದ್ಯುತ್ ದೀಪ ಅಳವಡಿಸುವಾಗ ಗ್ರಾಪಂ ನೀರಗಂಟಿ ವಿದ್ಯುತ್ ತಗುಲಿ ಸಾವನ್ನಪ್ಪಿ ಮತ್ತೊರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ನಾಗರಹಳ್ಳಿ ನಿವಾಸಿ ನಾರಾಯಣ್ ಎಸ್ ಸಿ (60) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಗ್ರಾಪಂ ಅಟೆಂಡರ್ ಶ್ರೀಧರ್ ಗೆ ಗಂಭೀರ ಗಾಯಗಳಾಗಿವೆ.
ದೂರಿನಲ್ಲೇನಿದೆ…???
ನಾರಾಯಣ ಎಸ್. ಸಿ ರವರು ವ್ಯವಸಾಯ ಕೆಲಸದೊಂದಿಗೆ ಹುಂಬಾ ಗ್ರಾಮ ಪಂಚಾಯ್ತಿಯಲ್ಲಿ ಈಗ 1 ವರ್ಷದಿಂದ ನೀರಘಂಟಿ ಕೆಲಸ ಮಾಡಿಕೊಂಡಿದ್ದು, ಅಲ್ಲದೇ ಗ್ರಾಮ ಪಂಚಾಯ್ತಿಯ ಬೀದಿ ದೀಪಗಳನ್ನು ವಿದ್ಯುತ್ ಕಂಬಕ್ಕೆ ಅಳವಡಿಸುವ ಕೆಲಸವನ್ನು ಮಾಡಿಕೊಂಡಿದ್ದು, ಗ್ರಾಮ ಪಂಚಾಯ್ತಿಯವರು. ಇದಕ್ಕೆ ಹಣವನ್ನು ಕೊಡುತ್ತಿದ್ದರು.
ದಿನಾಂಕ:13/09/2023 ರಂದು ಮಧ್ಯಾಹ್ನ 1-30 ಗಂಟೆಯ ಸಮಯದಲ್ಲಿ ರಾಘವೇಂದ್ರ ರವರು ಫೋನ್ ಮಾಡಿ ನಾರಾಯಣ ರವರು ಗ್ರಾಮ ಪಂಚಾಯ್ತಿಯ ವತಿಯಿಂದ ಹುಂಚಾದ ಆನೆಗದ್ದೆಯಲ್ಲಿ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳನ್ನು ಹಾಕುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ನಾನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಬೇಗ ಬನ್ನಿ ಎಂದಿದ್ದಾರೆ.
ಕೋಣಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾಗಿ ತಿಳಿಸಿರುತ್ತಾರೆ ಅಲ್ಲದೇ ನಂತರ ಶವವನ್ನು ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಶವಾಗಾರದಲ್ಲಿರಿಸಿದ್ದಾರೆ.
ಈಗ್ಗೆ ಒಂದು ತಿಂಗಳ ಹಿಂದೆ ಹುಂಚಾ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಸೇರಿಕೊಂಡು ಮೀಟಿಂಗ್ ಮಾಡಿ ಮಾವ ನಾರಾಯಣ ಹಾಗೂ ಅಟೆಂಡರ್ ಶ್ರೀಧರ್ ರವರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಬೀದಿ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳನ್ನು ಅಳವಡಿಸುವಂತೆ ಸೂಚನೆ ಮಾಡಿದ್ದು ಪ್ರತಿ ದಿವಸ ಬೀದಿ ದೀಪಗಳನ್ನು ಹಾಕುತ್ತಿದ್ದರು. ಅದೇ ರೀತಿ ಬುಧವಾರ ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ನಾರಾಯಣ ಎಸ್. ಸಿ ರವರು ಮನೆಯಿಂದ ಗ್ರಾಮ ಪಂಚಾಯ್ತಿಗೆ ಹೋದಾಗ ಅಲ್ಲಿನ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಹಾಗೂ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಆನೆಗದ್ದೆ ಭಾಗಕ್ಕೆ ಬೀದಿ ದೀಪಗಳನ್ನು ಅಳವಡಿಸುವಂತೆ ತಿಳಿಸಿದ್ದರಿಂದ ನಾರಾಯಣ ಹಾಗೂ ಅಟೆಂಡರ್ ಶ್ರೀಧರ್ ರವರು ಕಬ್ಬಿಣದ ಏಣಿಯನ್ನು ತೆಗೆದುಕೊಂಡು ಆನೆಗದ್ದ ಏರಿಯಾದಲ್ಲಿ ಬೀದಿ ದೀಪಗಳನ್ನು ಅಳವಡಿಸುತ್ತಾ ಮಧ್ಯಾಹ್ನ 1-30 ಗಂಟೆಗೆ ಆನೆಗದ್ದೆ ಜಂಬಿ ರಸ್ತೆ ಹೊಸನೀರಿನ ಟ್ಯಾಂಕ್ ಹತ್ತಿರವಿರುವ ವಿದ್ಯುತ್ ಕಂಬಕ್ಕೆ 18 ಎತ್ತರದ ಏಣಿಯನ್ನು ಚಾಚಿಕೊಂಡಿದ್ದು, ಶ್ರೀಧರ್ ಏಣಿಯನ್ನು ಹಿಡಿದುಕೊಂಡಿದ್ದು ಕಬ್ಬಿಣದ ಏಣಿ ಮೂಲಕ ಮಾವ ನಾರಾಯಣ ರವರು ವಿದ್ಯುತ್ ದೀಪಗಳನ್ನು ಅಳವಡಿಸಲು ಏಣಿಯನ್ನು ಹತ್ತುತ್ತಿದ್ದಾಗ ಏಣಿ ವಾಲಿ ಎಲ್ ಟಿ ಲೈನ್ ಪಕ್ಕದಲ್ಲಿ ಹಾದು ಹೋದ ಪವಾರ್ ಲೈನ್ || ಕೆ.ಎ ವಿದ್ಯುತ್ ಲೈನ್ ಕೆಳಭಾಗದಲ್ಲಿದ್ದುದ್ದರಿಂದ ಆ ಲೈನ್ ಗೆ ಏಣಿ ತಾಗಿ ಏಣಿ ಮೇಲಿದ್ದ ನಾರಾಯಣರವರಿಗೆ ವಿದ್ಯುತ್ ತಗಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದು, ಕೆಳಗೆ ಏಣಿ, ಹಿಡಿದುಕೊಂಡಿದ್ದ ಶ್ರೀಧರ್ ರವರಿಗೆ ಕೈಗಳಿಗೆ ವಿದ್ಯುತ್ ತಗಲಿ ಸುಟ್ಟಿರುತ್ತೆ.
ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಯ ಚುನಾಯಿತ ಪ್ರತಿನಿಧಿಗಳು – ಮೀಟಿಂಗ್ ಮಾಡಿ ಫಿರಾದುದಾರರ ತಂದೆ ಹಾಗೂ ಶ್ರೀಧರ್ ರವರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಬೀದಿ ಬದಿಯ ವಿದ್ಯುತ್ ಕಂಬಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲು ತಿಳಿಸಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇದ್ದಿದ್ದರಿಂದ ವಿದ್ಯುತ್ ಕಂಬವನ್ನು ಕಬ್ಬಿಣದ ಏಣಿಯ ಮೂಲಕ ಹತ್ತಲು ಹೋಗಿ ವಿದ್ಯುತ್ ಶಾಖ್ ಆಗಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾರೆ. ಶ್ರೀಧರ್ ರವರಿಗೆ ವಿದ್ಯುತ್ ಶಾಖ್ ಆಗಿ ಕೈಗಳಿಗೆ ಗಾಯವಾಗಿ ಚಿಕಿತ್ಸೆಯಲ್ಲಿರುತ್ತಾರೆ. ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ನಿರ್ಲಕ್ಷತನ ತೋರಿ ನಾರಾಯಣ್ ರವರ ಸಾವಿಗೆ ಹಾಗೂ ಶ್ರೀಧರ್ ಕೈಗಳಿಗೆ ಗಾಯವಾಗಲು ಕಾರಣರಾದ ಹುಂಚಾ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವರ್ಗ ಹಾಗೂ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ.