Headlines

ಕಾಡುಬೆಕ್ಕು ಬೇಟೆ: ನಾಡ ಬಂದೂಕು, ಗುಂಡುಗಳು ಹಾಗೂ ಮಾಂಸ ವಶ – ಆರೋಪಿಯ ವಿರುದ್ಧ ಕೇಸು ದಾಖಲು

ಕಾಡುಬೆಕ್ಕು ಬೇಟೆ: ನಾಡ ಬಂದೂಕು, ಗುಂಡುಗಳು ಹಾಗೂ ಮಾಂಸ ವಶ – ಆರೋಪಿಯ ವಿರುದ್ಧ ಕೇಸು ದಾಖಲು

A man near Anavatti in Soraba taluk has been booked under the Arms Act for allegedly hunting a wildcat using an illegal country-made gun. Forest officials seized weapons, ammunition and cooked wildcat meat during a raid.

ಸೊರಬ: ತಾಲ್ಲೂಕಿನ ಆನವಟ್ಟಿ ಸಮೀಪ ಅಕ್ರಮವಾಗಿ ನಾಡ ಬಂದೂಕು ಬಳಸಿ ಕಾಡುಬೆಕ್ಕನ್ನು ಬೇಟೆಯಾಡಿ ಹತ್ಯೆ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಆರೋಪಿಯ ಮನೆಯಿಂದ ಅಕ್ರಮ ಶಸ್ತ್ರಾಸ್ತ್ರ, ಗುಂಡುಗಳು ಹಾಗೂ ಕಾಡುಬೆಕ್ಕಿನ ಮಾಂಸ ಪತ್ತೆಯಾಗಿದ್ದು, ಬಳಿಕ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಅರಣ್ಯ ಇಲಾಖೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಆನವಟ್ಟಿ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಜಾವೀದ್ ಭಾಷಾ ಅಂಗಡಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆರೋಪಿಯ ನಿವಾಸದ ಮೇಲೆ ದಾಳಿ ನಡೆಸಿತು. ಈ ವೇಳೆ ಮನೆಯಲ್ಲಿದ್ದ ಒಂಟಿ ಕೊಳವೆಯ ನಾಡ ಬಂದೂಕು, 12 ಸೀಸದ ಗುಂಡುಗಳು, 4 ತಾಮ್ರದ ಕೇಫ್‌ಗಳು, ಒಂದು ಚರ್ಮದ ಬ್ಯಾಗ್ ಹಾಗೂ ಸುಮಾರು 800 ಗ್ರಾಂ ಬೇಯಿಸಿದ ಕಾಡುಬೆಕ್ಕಿನ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ್ದು, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇರೆಗೆ 2026ರ ಜೂನ್ 15ರಂದು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959ರ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

About The Author