RIPPONPETE | ಪೂಜಾ ಎಂ.ಎನ್‌ಗೆ ಗಣಿತಶಾಸ್ತ್ರದಲ್ಲಿ ಪಿಎಚ್.ಡಿ ಪದವಿ
Pooja M.N from Arasalu village near Ripponpet has been awarded a PhD in Mathematics by Kuvempu University. She completed her research under the guidance of Prof. S.K. Narasimhamurthy. Her achievement has been widely appreciated by her family and the academic community.
RIPPONPETE | ಪೂಜಾ ಎಂ.ಎನ್‌ಗೆ ಗಣಿತಶಾಸ್ತ್ರದಲ್ಲಿ ಪಿಎಚ್.ಡಿ ಪದವಿ
ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮದ ಪೂಜಾ ಎಂ.ಎನ್ ಅವರು ಗಣಿತಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಮೂಲತಃ ಶಿವಮೊಗ್ಗ ನಿವಾಸಿಗಳಾದ ಪೂಜಾ ಎಂ.ಎನ್ ಅವರು ಅರಸಾಳು ಗ್ರಾಮದ ರೋಹನ್ ಸಾಕ್ರೆ ಅವರ ಪತ್ನಿಯಾಗಿದ್ದಾರೆ. ಕುವೆಂಪು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ “ಥಿಯರಿಟಿಕಲಿ ಇನ್ವೆಸ್ಟಿಗೇಷನ್ ಆಫ್ ಬೌಂಡರಿ ಲೇಯರ್ ಫ್ಲೋ ಅಂಡ್ ಹೀಟ್ ಟ್ರಾನ್ಸ್ಫರ್ ಓವರ್ ಸರ್ಟೈನ್ ಜಾಮಿಟ್ರೀಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನಿಸಲಾಗಿದೆ.
ಈ ಸಂಶೋಧನಾ ಕಾರ್ಯವನ್ನು ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್.ಕೆ. ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಪೂಜಾ ಎಂ.ಎನ್ ಅವರು ಶಿವಮೊಗ್ಗ ನಿವಾಸಿಗಳಾದ ನಾಗರಾಜ್ ಮತ್ತು ಶಾರದ ದಂಪತಿಗಳ ಪುತ್ರಿಯಾಗಿದ್ದು, ಅವರ ಪತಿ ರೋಹನ್ ಸಾಕ್ರೆ ಅವರು ಅರಸಾಳು ಗ್ರಾಮದ ರಾಜು ಟೈಲರ್ ಮತ್ತು ವಿಜಯ ದಂಪತಿಗಳ ಪುತ್ರರಾಗಿದ್ದಾರೆ.
ಪೂಜಾ ಎಂ.ಎನ್ ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ಬಂಧುಗಳು ಹಾಗೂ ಶೈಕ್ಷಣಿಕ ವಲಯದ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
