Ripponpete | ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು


ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು
 ರಿಪ್ಪನ್‌ಪೇಟೆ – ಸಹಕಾರಿ ಕ್ಷೇತ್ರವನ್ನು ನಾವು ಇಂದು ಉಳಿಸಿ ಬೆಳೆಸಬೇಕಾಗಿದೆ. ಹಳೆ ನಂಬರ್ ಕ್ಷೇತ್ರದ ರೈತರ ಪರವಾಗಿ ಸದಾ ನಾನು ನಿಮ್ಮೊಂದಿಗೆ ಧ್ವನಿಯಾಗಿರುತ್ತೇನೆ  ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರಸದೆ  ಎತ್ತರಕ್ಕೆ ಬೆಳೆಸುವಂತೆ  ಆಗಬೇಕು ಎಂದು ಶಾಸಕ  ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ  ನಡೆದ ಕರ್ನಾಟಕ ರಾಜ್ಯ ಮಹಾಮಂಡಳ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಡಿಸಿಸಿ ಬ್ಯಾಂಕ್, ಸಹಕಾರ ಹಾಲು ಒಕ್ಕೂಟ,, ಹೊಸನಗರ ತಾಲೂಕಿನ ಸಹಕಾರ ಸಂಘ ಮತ್ತು ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ಯಾರೆಂಟಿ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ 32 ಸಾವಿರ ಕೋಟಿ ಹಣ ವ್ಯಯವಾಗುತ್ತಿರುವುದರಿಂದ ಸಾಲ ಮನ್ನಾ ಮಾಡುವ ಕೆಲಸಕ್ಕೆ ಸರ್ಕಾರ ಹೋಗುವುದಿಲ್ಲ,ಜಿಲ್ಲೆಯ ಪ್ರತಿ ಗ್ರಾಪಂ ಮಟ್ಟದಲ್ಲಿ ಒಂದು ಸಹಕಾರ ಸಂಘ ಆರಂಭಿಸಬೇಕು ಎಂಬ ನಿಯಮದಂತೆ ನಿರ್ಣಯ ಕೈಗೊಳ್ಳಲು ಸಹಕಾರಿಗಳಿಗೆ ಕರೆ ನೀಡಿದ ಅವರು ಸಹಕಾರಿ ಮಹಿಳಾ ಸಂಘಗಳು ಸ್ಥಾಪನೆ ಆಗಬೇಕು. ಸಹಕಾರಿ ಕ್ಷೇತ್ರ ಗಟ್ಟಿಯಾದರೆ ಕಟ್ಟ ಕಡೆಯ ವ್ಯಕ್ತಿ ಗಟ್ಟಿಯಾಗುತ್ತಾನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ  ನಿ, ಶಿವಮೊಗ್ಗ ಅಧ್ಯಕ್ಷರಾದ ಕೆ ರತ್ನಾಕರ್ ವಹಿಸಿದ್ದರು,ಸಹಕಾರಿ ಧುರೀಣ ವಾಟಗೋಡು ಸುರೇಶ್ ಪ್ರಸ್ತಾವಿಕ ಮಾತನಾಡಿದರು .
 
ಸಮಾರಂಭದಲ್ಲಿ ವಿವಿಧ ಸಹಕಾರಿ ಕ್ಷೇತ್ರದ ಮುಖಂಡರುಗಳಾದ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಎಂ ಪರಮೇಶ್,, ಸುಧೀರ್, ವಿದ್ಯಾದರ್, ಎಂ ವಿ ಜಯರಾಮ್ , ಎಚ್ ನಾಗರಾಜ್, ವಿನಯ್ ಕುಮಾರ್, ಬಿಪಿ ರಾಮಚಂದ್ರ, ಗ್ರಾಪಂ ಅಧ್ಯಕ್ಷೇ ಧನಲಕ್ಷ್ಮಿ ಗಂಗಾಧರ್, ಹರೀಶ್ ಗೌಡ ಇನ್ನು ಮುಂತಾದವರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಎಚ್ಎನ್ ವಿದ್ಯಾಧರ್ ಸ್ವಾಗತಿಸಿ ಪ್ರದೀಪ್ ನಿರೂಪಿಸಿದರು.

Leave a Reply

Your email address will not be published. Required fields are marked *