w
Headlines
Home » ಶಿವಮೊಗ್ಗ ಬ್ರೇಕಿಂಗ್ | ಅಮೀರ್ ಅಹಮದ್ ಸರ್ಕಲ್ ಬಳಿ ಯುವಕನಿಗೆ ಚಾಕು ಇರಿತ

ಶಿವಮೊಗ್ಗ ಬ್ರೇಕಿಂಗ್ | ಅಮೀರ್ ಅಹಮದ್ ಸರ್ಕಲ್ ಬಳಿ ಯುವಕನಿಗೆ ಚಾಕು ಇರಿತ

GridArt 20251222

Shivamogga Breaking | A young man was stabbed near Aamir Ahmed Circle.

ಶಿವಮೊಗ್ಗ ಬ್ರೇಕಿಂಗ್ | ಅಮೀರ್ ಅಹಮದ್ ಸರ್ಕಲ್ ಬಳಿ ಯುವಕನಿಗೆ ಚಾಕು ಇರಿತ

Shivamogga: Another stabbing incident has been reported in the city. A young man was stabbed by miscreants near a mobile shop near AA Circle today.

ಶಿವಮೊಗ್ಗ: ನಗರದಲ್ಲಿ ಮತ್ತೆ ಚಾಕು ಇರಿತದ ಘಟನೆ ವರದಿಯಾಗಿದ್ದು, ಎಎ ಸರ್ಕಲ್ ಸಮೀಪದ ಮೊಬೈಲ್ ಅಂಗಡಿ ಬಳಿ ಯುವಕನೊಬ್ಬನಿಗೆ ಕಿಡಿಗೇಡಿಗಳು ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಸಯ್ಯದ್ ಬರ್ಕತ್ (32) ಎಂದು ಗುರುತಿಸಲಾಗಿದೆ. ಅವರು ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ಪ್ರದೇಶದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದು, ಲಷ್ಕರ್ ಮೊಹಲ್ಲಾ ನಿವಾಸಿಯಾಗಿದ್ದಾರೆ. ಮೊಬೈಲ್ ಅಂಗಡಿ ಬಳಿಯೇ ಬಂದು ಕಿಡಿಗೇಡಿಗಳು ಸಯ್ಯದ್ ಬರ್ಕತ್ ಮೇಲೆ ದಾಳಿ ನಡೆಸಿ, ಕೈ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕು ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ತೀವ್ರ ಗಾಯಗೊಂಡ ಸಯ್ಯದ್ ಬರ್ಕತ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹಳೆಯ ದ್ವೇಷದ ಹಿನ್ನೆಲೆ ಈ ಚಾಕು ಇರಿತ ನಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಸ್ಥಳ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

Shivamogga: Another stabbing incident has been reported in the city. A young man was stabbed by miscreants near a mobile shop near AA Circle today.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.