Headlines

ಮೂರು ಕೋಟಿ ಇನ್ಸೂರೆನ್ಸ್ ಹಣಕ್ಕಾಗಿ ತಂದೆಯನ್ನು ಹಾವು ಕಚ್ಚಿಸಿ ಕೊಂದ ಪಾಪಿ ಮಕ್ಕಳು

Sinful children killed their father by biting him with a snake for three crores of insurance money

ಮೂರು ಕೋಟಿ ವಿಮಾ ಹಣಕ್ಕಾಗಿ ಹಾವು ಕಚ್ಚಿಸಿ ತಂದೆಯ ಹತ್ಯೆ: ಇಬ್ಬರು ಪುತ್ರರ ಸೇರಿ ಐವರ ಬಂಧನ

Sinful children killed their father by biting him with a snake for three crores of insurance money

Sinful children killed their father by biting him with a snake for three crores of insurance money

Sinful children killed their father by biting him with a snake for three crores of insurance money


ತಮಿಳುನಾಡಿನ ತಿರುತ್ತಣಿ ಸಮೀಪದ ಪೊಥಟ್ಟೂರ್‌ಪೆಟ್ಟೈ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಾವು ಕಡಿತ ಸಾವಿನ ಪ್ರಕರಣದಲ್ಲಿ ಭೀಕರ ಸತ್ಯ ಬೆಳಕಿಗೆ ಬಂದಿದೆ. ತಿರುತ್ತಣಿ ಸರ್ಕಾರಿ ಶಾಲೆಯ ಪ್ರಯೋಗಾಲಯ ಸಹಾಯಕ ಇ.ಪಿ. ಗಣೇಶ್‌ (59) ಅವರ ಸಾವು ಆಕಸ್ಮಿಕವಲ್ಲ, ಮೂರು ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ರೂಪಿಸಿದ ಪೂರ್ವಯೋಜಿತ ಹತ್ಯೆ ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.


ಘಟನೆ ಬಳಿಕ ಗಣೇಶ್ ಅವರ ಪುತ್ರ ಜಿ. ಮೋಹನ್ ರಾಜ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮೊದಲಿಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಆರಂಭಿಕ ತನಿಖೆಯಲ್ಲಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಗಣೇಶ್ ಅವರ ನಿಧನದ ಕೆಲವೇ ತಿಂಗಳಲ್ಲಿ ಕುಟುಂಬವು ಭಾರೀ ಮೊತ್ತದ ವಿಮಾ ಕ್ಲೈಮ್ ಸಲ್ಲಿಸಿದ್ದರಿಂದ ಅನುಮಾನಗಳು ಹೆಚ್ಚಾಗಿವೆ.


ಒಟ್ಟು ಸುಮಾರು ಮೂರು ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಪುತ್ರರ ನಡವಳಿಕೆ ಅನುಮಾನಾಸ್ಪದವೆಂದು ಕಂಡ ವಿಮಾ ಕಂಪನಿ, ತಮಿಳುನಾಡಿನ ಉತ್ತರ ವಲಯದ ಪೊಲೀಸ್ ಮಹಾನಿರ್ದೇಶಕಿ ಆಸ್ರಾ ಗಾರ್ಗ್ ಅವರಿಗೆ ದೂರು ನೀಡಿತು. ಇದಾದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿತು.ಪೊಲೀಸರು ಪುನಃ ತನಿಖೆ ಕೈಗೊಂಡು ಕುಟುಂಬದ ಮನೆಗೆ ಭೇಟಿ ನೀಡಿ ಶೋಧ ನಡೆಸಿದರು. ಈ ವೇಳೆ ಕುಟುಂಬವು ವಿವಿಧ ಮೂಲಗಳಿಂದ ಸಾಲ ಮಾಡಿಕೊಂಡಿರುವುದು ಹಾಗೂ ಆದಾಯಕ್ಕೆ ಮೀರಿ ಭಾರೀ ಮೊತ್ತದ ವಿಮಾ ಪಾಲಿಸಿಗಳನ್ನು ಪಡೆದಿರುವುದು ಬೆಳಕಿಗೆ ಬಂತು. ಈ ಅಂಶಗಳು ತನಿಖಾಧಿಕಾರಿಗಳ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು.


ತೀವ್ರ ವಿಚಾರಣೆಯಲ್ಲಿ, ಗಣೇಶ್ ಅವರ ಇಬ್ಬರು ಪುತ್ರರು ತಮ್ಮ ತಂದೆಯನ್ನು ಕೊಂದು ವಿಮಾ ಹಣ ಪಡೆಯಲು ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಮನವೂರಿನ ಜಿ. ಬಾಲಾಜಿ, ಬಿ. ಪ್ರಶಾಂತ್, ಮೋಸರು ಗ್ರಾಮದ ಎಸ್. ದಿನಕರ್ ಹಾಗೂ ಮನವೂರಿನ ಜಿ. ನವೀನ್ ಕುಮಾರ್ ಎಂಬ ನಾಲ್ವರ ಸಹಾಯದಿಂದ ಹತ್ಯೆ ನಡೆಸಿರುವುದಾಗಿ ತಿಳಿಸಿದ್ದಾರೆ.


ಆರೋಪಿಗಳ ಪ್ರಕಾರ, ಗಣೇಶ್ ಮಲಗಿದ್ದ ವೇಳೆ ಅವರ ಕುತ್ತಿಗೆ ಮೇಲೆ ಹಾವನ್ನು ಬಿಡಲಾಗಿತ್ತು. ಹಾವು ಕಚ್ಚಿದ ಪರಿಣಾಮ ಅವರು ಮೃತಪಟ್ಟರು. ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಹಾವನ್ನೇ ಕೊಂದು ಹಾಕಲಾಗಿದೆ. ಈ ಕೃತ್ಯವನ್ನು ಅಪಘಾತದಂತೆ ತೋರಿಸಲು ಪ್ರಯತ್ನಿಸಲಾಗಿತ್ತು.


ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಪುತ್ರರು ಸೇರಿ ಐವರು ಆರೋಪಿಗಳನ್ನು ಬಂಧಿಸಿ, ಮುಂದಿನ ತನಿಖೆ ಮುಂದುವರೆಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಮರೆತು ಹಣದ ಲಾಲಸೆಗೆ ಸ್ವಂತ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಆಘಾತ ಮೂಡಿಸಿದೆ.