ಮಲೆನಾಡಿನಲ್ಲಿ ಖ್ಯಾತ ಯೂಟ್ಯೂಬರ್ಸ್ ಡಾ. ಬ್ರೋ ಮತ್ತು ಫ್ಲೈಯಿಂಗ್ ಪಾಸ್ ಪೋರ್ಟ್
ತೀರ್ಥಹಳ್ಳಿ: ಕರ್ನಾಟಕದ ಪ್ರಸಿದ್ಧ ಯೂಟ್ಯೂಬರ್ಸ್ ಗಳು ಮಲೆನಾಡಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿ, ಮಲೆನಾಡ ಹೆಬ್ಬಾಗಿಲಾದ ತೀರ್ಥಹಳ್ಳಿ ತಾಲೂಕಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಪ್ರಸಿದ್ಧ ಯೂಟ್ಯೂಬರ್ ಗಳಾದ ಡಾ, ಬ್ರೋ ಪ್ಲೇಯಿಂಗ್ ಪಾಸ್ಪೋರ್ಟ್, ಗ್ಲೋಬಲ್ ಕನ್ನಡಿಗ ಈ ಮೂವರು ಕೂಡ ಒಟ್ಟಿಗೆ ಮಲೆನಾಡಿನ ಸ್ಥಳಗಳಿಗೆ ಭೇಟಿ ನೀಡಿ ಇಲ್ಲಿನ ಪರಿಸರ ನೋಡಿ ಸಂಭ್ರಮಪಟ್ಟಿದ್ದಾರೆ.
ಆಗುಂಬೆ, ಶೃಂಗೇರಿ ಹಾಗೂ ಸುತ್ತಮುತ್ತ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ. ರಾಜ್ಯದ ಪ್ರಸಿದ್ಧ ಯುಟ್ಯೂಬರ್ ಆಗಿರುವ ಡಾ. ಬ್ರೋ ನಾ ಗಗನ್ ಶ್ರೀನಿವಾಸ್ , ಫೈಯಿಂಗ್ ಪಾಸ್ಪೋರ್ಟ್ ನಾ ಕಿರಣ್ ಮತ್ತು ಆಶಾ ದಂಪತಿ, ಗ್ಲೋಬಲ್ ಕನ್ನಡಿಗ ಖ್ಯಾತಿಯ ಮಹಾಬಲರಾಮ್ ಒಟ್ಟಿಗೆ ಭೇಟಿ ನೀಡಿ ಮಲೆನಾಡಿನ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಇಲ್ಲಿನ ವಿಶೇಷತೆಗಳ ಬಗ್ಗೆ ಕೂಡ ಮಾಹಿತಿಯನ್ನು ನೀಡಲಿದ್ದಾರೆ.
ಶೀಘ್ರದಲ್ಲಿ ಮಲೆನಾಡಿನ ವಿವಿಧ ತಾಣಗಳ ವಿಡಿಯೋಗಳು ಪ್ರಸಿದ್ಧ ಯೂಟ್ಯೂಬ್ ವಾಲ್ ಗಳಲ್ಲಿ ಕಾಣಿಸಿಕೊಳ್ಳಲಿದೆ.