w
Headlines
Home » ಶಂಕರಮಠ ರಸ್ತೆಯ ರಾಹುಲ್ ಹುಂಡೈ  ಶೋರೂಮ್‌ನಲ್ಲಿ ಮತ್ತೆ ಅಗ್ನಿ ಆಕಸ್ಮಿಕ

ಶಂಕರಮಠ ರಸ್ತೆಯ ರಾಹುಲ್ ಹುಂಡೈ  ಶೋರೂಮ್‌ನಲ್ಲಿ ಮತ್ತೆ ಅಗ್ನಿ ಆಕಸ್ಮಿಕ

Unnamed (5)

ಶಂಕರಮಠ ರಸ್ತೆಯ ರಾಹುಲ್ ಹುಂಡೈ  ಶೋರೂಮ್‌ನಲ್ಲಿ ಮತ್ತೆ ಅಗ್ನಿ ಆಕಸ್ಮಿಕ

Small fire accident reported at Rahul Hyundai car showroom on Shankaram Road in Shivamogga. Firefighters quickly controlled the blaze, preventing a major mishap.

ಶಿವಮೊಗ್ಗ: ನಗರದ ಶಂಕರಮ ರಸ್ತೆಯಲ್ಲಿರುವ ರಾಹುಲ್ ಹುಂಡೈ ಕಾರು ಶೋರೂಮ್‌ನಲ್ಲಿ ಗುರುವಾರ ಸಂಜೆ ಸುಮಾರು 5.25ರ ವೇಳೆಗೆ ಸಣ್ಣ ಪ್ರಮಾಣದ ಅಗ್ನಿ ಆಕಸ್ಮಿಕ ಸಂಭವಿಸಿದೆ.

ಶೋರೂಮ್‌ನ ಮುಂಭಾಗದಲ್ಲಿರುವ ನೇಮ್‌ಪ್ಲೇಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ತೀವ್ರತೆಗೆ ನೇಮ್‌ಪ್ಲೇಟ್‌ನಲ್ಲಿದ್ದ ಕನ್ನಡದ ಅಕ್ಷರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅದೇ ವೇಳೆ ನೇಮ್‌ಪ್ಲೇಟ್‌ನಲ್ಲಿದ್ದ ಇಂಗ್ಲಿಷ್ ಬರಹದ ಭಾಗ ಬಹುತೇಕ ಬೆಂಕಿಯಿಂದ ಪಾರಾಗಿದೆ.

ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಎರಡು ವರ್ಷಗಳ ಹಿಂದಿನ ಭೀಕರ ಅಗ್ನಿ ಅವಘಡದ ನೆನಪು

ರಾಹುಲ್ ಹುಂಡೈ ಶೋರೂಮ್‌ನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿರುವುದು ಎರಡು ವರ್ಷಗಳ ಹಿಂದಿನ ಭೀಕರ ಅಗ್ನಿ ಅವಘಡದ ನೆನಪನ್ನು ಮರುಕಳಿಸಿದೆ.

2024ರಲ್ಲಿ ಇದೇ ಶೋರೂಮ್‌ನಲ್ಲಿ ರಾತ್ರಿ ವೇಳೆ ಸಂಭವಿಸಿದ್ದ ಭೀಕರ ಅಗ್ನಿ ಅವಘಡದಲ್ಲಿ ಸರ್ವಿಸ್‌ಗೆ ಬಿಟ್ಟಿದ್ದ ಕಾರುಗಳು ಸೇರಿದಂತೆ ಶೋರೂಮ್‌ನಲ್ಲಿದ್ದ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಬೆಂಕಿಯ ತೀವ್ರತೆಗೆ ಅನೇಕ ವಾಹನಗಳು ಸುಟ್ಟು ಕರಕಲಾಗಿದ್ದು, ಭಾರಿ ಪ್ರಮಾಣದ ಆಸ್ತಿ ನಷ್ಟ ಸಂಭವಿಸಿತ್ತು.

ಗುರುವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಯಾವುದೇ ದೊಡ್ಡ ಅನಾಹುತ ಸಂಭವಿಸದೆ, ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.