w
Headlines
Home » ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು

ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು

Screenshot 2026 08 25 19 18 46 285 com.openai.chatgpt edit

ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು

Gold mangalsutra lost in Gurushakti bus returned to its owner by honest bus staff Ashraf and Moujim, earning appreciation for their integrity and humanity.

ರಿಪ್ಪನ್‌ಪೇಟೆ: ಗುರುಶಕ್ತಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಬಂಗಾರದ ಮಾಂಗಲ್ಯ ಸರವನ್ನು ಬಸ್ ಸಿಬ್ಬಂದಿ ಪ್ರಾಮಾಣಿಕತೆಯಿಂದ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೆಎ-15 9446 ನೋಂದಣಿಯ ಗುರುಶಕ್ತಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಪ್ಪಿಗ ನಿವಾಸಿ ಸುಲೋಚನಾ ಅವರು ತಮ್ಮ ಬಂಗಾರದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು.

ಬಸ್‌ನಲ್ಲಿ ಸರ ಪತ್ತೆಯಾದ ಬಳಿಕ ಕಾರ್ಯನಿರ್ವಾಹಕ ಅಶ್ರಫ್ ಜಯನಗರ ಹಾಗೂ ಚಾಲಕ ಮೌಜಿಮ್ ಹೊಸನಗರ ಅವರು ಅದನ್ನು ಸುರಕ್ಷಿತವಾಗಿ ಇಟ್ಟು, ನೈಜ ಮಾಲೀಕರಿಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇಂದು ಮಧ್ಯಾಹ್ನ ಜೇನಿ ಗ್ರಾಮದ ರಾಜಣ್ಣ ಅವರ ಸಮ್ಮುಖದಲ್ಲಿ ಸರವನ್ನು ಸುಲೋಚನಾ ಅವರ ಪರವಾಗಿ ಭಾಸ್ಕರಾಚಾರ್ ಅವರು ಸ್ವೀಕರಿಸಿದರು. ಈ ವೇಳೆ ಸಿಬ್ಬಂದಿಯ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಲಾಯಿತು.

ಬೆಲೆಬಾಳುವ ವಸ್ತು ದೊರೆತರೂ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಮಾಲೀಕರಿಗೆ ಮರಳಿಸಿದ ಅಶ್ರಫ್ ಮತ್ತು ಮೌಜಿಮ್ ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಪ್ರಾಮಾಣಿಕ ಕಾರ್ಯಗಳು ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.