Headlines

ಸಾಲದ ಬಾಧೆಗೆ ಬೇಸತ್ತು ಹೊಟೇಲ್ ಕೊಠಡಿಯಲ್ಲಿ ಕ್ರಷರ್ ಉದ್ಯಮಿ ಆತ್ಮ*ಹತ್ಯೆ

ಸಾಲದ ಬಾಧೆಗೆ ಬೇಸತ್ತು ಹೊಟೇಲ್ ಕೊಠಡಿಯಲ್ಲಿ ಕ್ರಷರ್ ಉದ್ಯಮಿ ಆತ್ಮ*ಹತ್ಯೆ | ಶಿವಮೊಗ್ಗ ಸುದ್ದಿ

A 42-year-old crusher entrepreneur from Shivamogga allegedly died by suicide in a hotel room after struggling with heavy debts and business losses. Police have registered a case and started an investigation.

ಶಿವಮೊಗ್ಗ: ಕಳೆದ ಐದು ವರ್ಷಗಳಿಂದ ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದ ಕ್ರಷರ್ ಉದ್ಯಮಿಯೊಬ್ಬರು ನಗರದ ಖಾಸಗಿ ಹೊಟೇಲ್‌ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮೃತರನ್ನು ಶಿವಮೊಗ್ಗ ನಗರದ ಗೋಪಾಳ ಬಡಾವಣೆಯ ನಿವಾಸಿ ನವೀನ್ ಕುಮಾರ್ ಬಳಗಾರ್ ಅಲಿಯಾಸ್ ಬಸವರಾಜ್ (42) ಎಂದು ಗುರುತಿಸಲಾಗಿದೆ.

ಉದ್ಯಮದಲ್ಲಿ ಉಂಟಾದ ನಷ್ಟ ಹಾಗೂ ಹೆಚ್ಚುತ್ತಿರುವ ಸಾಲದ ಹೊರೆಯಿಂದ ಮಾನಸಿಕವಾಗಿ ನೊಂದಿದ್ದ ನವೀನ್ ಕುಮಾರ್ ಅವರು ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದು ಅಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ದೊಡ್ಡಪೇಟೆ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ನಿಖರ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.

About The Author