Headlines

ಎಟಿಎಂ ಹಣ ಸಾಗಣೆ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ: ಚಾಲಕ ಪರಾರಿ

ಎಟಿಎಂ ಹಣ ಸಾಗಣೆ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ: ಚಾಲಕ ಪರಾರಿ

An ATM cash transport vehicle crashed into an electric pole near PES College on Honnali Main Road in Shivamogga. The driver fled the scene after the accident, and police have launched an investigation.

​ಶಿವಮೊಗ್ಗ: ನಗರದ ಹೊನ್ನಾಳಿ ಮುಖ್ಯರಸ್ತೆಯ ಪೇಸ್ ಕಾಲೇಜು ಸಮೀಪ ಎಟಿಎಂ ಹಣ ಸಾಗಣೆ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ನಡೆದಿದೆ.

​ಅಪಘಾತದಲ್ಲಿ ವಾಹನ ಚಾಲಕ ಸತೀಶ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿರುವುದನ್ನು ಗಮನಿಸಿದ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ 112 ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಾಹನವನ್ನು ಪರಿಶೀಲಿಸಿದ್ದಾರೆ. ವಾಹನದಲ್ಲಿ ಹಣವಿದೆಯೇ ಅಥವಾ ಇಲ್ಲವೇ ಎಂಬ ಕುರಿತು ತಪಾಸಣೆ ನಡೆಯುತ್ತಿದೆ.

​ಅಪಘಾತಕ್ಕೆ ನಿಖರ ಕಾರಣ ಹಾಗೂ ಚಾಲಕ ಸ್ಥಳದಿಂದ ಏಕೆ ಪರಾರಿಯಾದ ಎಂಬುದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author