ಪರಿಸರ ಸಂರಕ್ಷಣೆಗೆ ನಿತ್ಯ ಜಾಗೃತಿ ಅಗತ್ಯ – ಪಿಎಸ್‌ಐ ರಾಜುರೆಡ್ಡಿ | ರಿಪ್ಪನ್‌ಪೇಟೆಯಲ್ಲಿ ರೋಟರಿ ಕ್ಲಬ್‌ನಿಂದ ವನಮಹೋತ್ಸವ
PSI Rajureddy stressed the need for continuous environmental awareness during a Vanamahotsava sapling plantation drive organized by Rotary Club on the Hosanagara Road divider.
ರಿಪ್ಪನ್‌ಪೇಟೆ: ಪರಿಸರ ದಿನಾಚರಣೆ ಅಥವಾ ವನಮಹೋತ್ಸವವನ್ನು ಕೇವಲ ಒಂದು ದಿನ ಆಚರಿಸಿದರೆ ಸಾಕಾಗುವುದಿಲ್ಲ. ಪರಿಸರ ಸಂರಕ್ಷಣೆ ಕುರಿತು ಪ್ರತಿದಿನವೂ ಜಾಗೃತಿ ವಹಿಸುವುದು ಅತ್ಯಗತ್ಯ. ಇಲ್ಲವಾದರೆ ಪ್ರಕೃತಿಗೆ ಗಂಭೀರ ಅಪಾಯ ಎದುರಾಗಲಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹೇಳಿದರು.
ಪಟ್ಟಣದ ಹೊಸನಗರ ರಸ್ತೆಯ ಅಗಲೀಕರಣದ ಬಳಿಕ ನಿರ್ಮಿಸಲಾಗಿರುವ ಡಿವೈಡರ್‌ಗಳ ಮಧ್ಯಭಾಗದಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ನೂರಾರು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಬೆಳೆಸುವುದೇ ವನಮಹೋತ್ಸವದ ನಿಜವಾದ ಉದ್ದೇಶವಾಗಿದೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು, ಮರಗಳ ನಾಶ, ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದು ವಾಯುಮಾಲಿನ್ಯ ಮತ್ತು ಉಷ್ಣಾಂಶ ಏರಿಕೆಗೆ ಕಾರಣವಾಗುತ್ತಿದೆ. ಇದರ ಪರಿಣಾಮವಾಗಿ ಮಳೆಯ ಪ್ರಮಾಣ ಹಾಗೂ ಕೃಷಿ ಉತ್ಪಾದನೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಪರಿಸರ ಸಮತೋಲನ ಕಾಪಾಡಲು ವಿಶೇಷವಾಗಿ ಯುವಜನತೆ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.
ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ ಮಾತನಾಡಿ, ನಿರಂತರ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಖಚಿತ. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರವೇ ಉತ್ತಮ ಶಿಕ್ಷಣ ಮತ್ತು ಆರೋಗ್ಯಕರ ಸಮಾಜದ ಅಡಿಪಾಯವಾಗಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಇತರರಲ್ಲೂ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಮಾತನಾಡಿ, ಹಿಂದೆ ಜನರು ಹೆಚ್ಚು ಸೈಕಲ್ ಬಳಸುತ್ತಿದ್ದ ಕಾರಣ ಆರೋಗ್ಯವೂ ಉತ್ತಮವಾಗಿತ್ತು, ಪರಿಸರವೂ ಮಾಲಿನ್ಯದಿಂದ ಮುಕ್ತವಾಗಿತ್ತು. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿ ರಮೇಶ್ ಹೆಬ್ಬಾರ್ , ಗಣೇಶ್ ಕಾಮತ್, ರಾಧಾಕೃಷ್ಣ ಹೆಚ್.ಎ. ಎಂ ಬಿ ಮಂಜುನಾಥ್ , ರಾಧಾಕೃಷ್ಣ ಜೆ., ಡಾಕಪ್ಪ, ಹುಗುಡಿ ವರ್ತೇಶ್ ಗೌಡ, ಶಿವಕುಮಾರ್ ಶೆಟ್ಟಿ ,ಅಮಿತಾ ಬಲ್ಲಾಳ್ , ಗಣೇಶ್ ಆರ್., ಸಬಾಸ್ಟಿನ್ ಮ್ಯಾಥ್ಯೂಸ್ , ಮುಖೇಶ್ ಹಾಗೂ ಇನ್ನಿತರರು ಇದ್ದರು.
Create a WordPress feature image
ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ Farmers staged a massive protest…
ಇಂಡಿಯಾ ಪೋಸ್ಟ್‌ನಲ್ಲಿ 25,000ಕ್ಕೂ ಹೆಚ್ಚು ಹುದ್ದೆ: 10ನೇ ತರಗತಿ ಪಾಸಾದವರಿಗೆ ಅವಕಾಶ, ಪರೀಕ್ಷೆ ಇಲ್ಲದೆ ನೇಮಕಾತಿ India Post GDS…
ಶಂಕರಮಠ ರಸ್ತೆಯ ರಾಹುಲ್ ಹುಂಡೈ ಶೋರೂಮ್‌ನಲ್ಲಿ ಮತ್ತೆ ಅಗ್ನಿ ಆಕಸ್ಮಿಕ Small fire accident reported at Rahul Hyundai…
ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…
ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…
ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…