w
Headlines
Home » ಶಿಕಾರಿಪುರದಲ್ಲಿ ಭೀಕರ ಬೈಕ್ ಅಪಘಾತ: ಹಾರೋಗೊಪ್ಪದ ಯುವಕ ಸ್ಥಳದಲ್ಲೇ ಸಾವು

ಶಿಕಾರಿಪುರದಲ್ಲಿ ಭೀಕರ ಬೈಕ್ ಅಪಘಾತ: ಹಾರೋಗೊಪ್ಪದ ಯುವಕ ಸ್ಥಳದಲ್ಲೇ ಸಾವು

GridArt 20260622

ಶಿಕಾರಿಪುರದಲ್ಲಿ ಭೀಕರ ಬೈಕ್ ಅಪಘಾತ: ಹಾರೋಗೊಪ್ಪದ ಯುವಕ ಸ್ಥಳದಲ್ಲೇ ಸಾವು

A 32-year-old man from Harogoppa Tanda died in a tragic bike accident near Taralagatta village in Shikaripura taluk after losing control of his motorcycle and crashing into a roadside culvert.

ಶಿಕಾರಿಪುರ, ಜೂನ್ 22: ತಾಲೂಕಿನ ತರಲಗಟ್ಟ ಗ್ರಾಮದ ಈಶ್ವರ್ ಲೇಔಟ್ ಮುಂಭಾಗದ ರಸ್ತೆಯಲ್ಲಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತರನ್ನು ಹಾರೋಗೊಪ್ಪ ತಾಂಡಾ ನಿವಾಸಿ ಮಂಜುನಾಥ್ ಆರ್ (32) ಎಂದು ಗುರುತಿಸಲಾಗಿದೆ. ಅವರು ಅಡುಗೆ ಕೆಲಸ ಮಾಡುತ್ತಿದ್ದು, ಜೂನ್ 18ರಂದು ತಮ್ಮ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನಲ್ಲಿ ಶಿಕಾರಿಪುರಕ್ಕೆ ಕೆಲಸದ ನಿಮಿತ್ತ ತೆರಳಿದ್ದರು.

ಕೆಲಸ ಮುಗಿಸಿಕೊಂಡು ರಾತ್ರಿ ವೇಳೆ ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ತರಲಗಟ್ಟ ಗ್ರಾಮದ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮೋರಿ ಕಟ್ಟೆಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಮಂಜುನಾಥ್ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.