w
Headlines
Home » ಯುವತಿಯ ಸರ ಕಿತ್ತು ಪರಾರಿಯಾಗಿದ್ದ ಖದೀಮ ಸೆರೆ: ಕಾರು ಹಾಗೂ ಚಿನ್ನದ ಸರ ವಶ

ಯುವತಿಯ ಸರ ಕಿತ್ತು ಪರಾರಿಯಾಗಿದ್ದ ಖದೀಮ ಸೆರೆ: ಕಾರು ಹಾಗೂ ಚಿನ್ನದ ಸರ ವಶ

Images (2) (15)

ಯುವತಿಯ ಸರ ಕಿತ್ತು ಪರಾರಿಯಾಗಿದ್ದ ಖದೀಮ ಸೆರೆ: ಕಾರು ಹಾಗೂ ಚಿನ್ನದ ಸರ ವಶ

Shivamogga Rural Police arrested a man for snatching a woman’s gold chain near Abbalagere. The stolen 10g gold chain and the EcoSport car used in the crime have been recovered.

​ಶಿವಮೊಗ್ಗ: ತಾಲೂಕಿನ ಅಬ್ಬಲಗೆರೆ ಬಳಿ ಯುವತಿಯೊಬ್ಬಳ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

​ಮಂಜುನಾಥ ನಾಯ್ಕ ಬಂಧಿತ ಆರೋಪಿ. ಈತನನ್ನು ದಸ್ತಗಿರಿ ಮಾಡಿರುವ ಪೊಲೀಸರು, ಆತನಿಂದ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಚಿನ್ನದ ಸರವನ್ನು ಜಪ್ತಿ ಮಾಡಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಘಟನೆಯ ವಿವರ

ಕಳೆದ ಏಪ್ರಿಲ್ ೨೨ರಂದು ಸಂಜೆ ಯುವತಿಯೊಬ್ಬಳು ಕಾರಿನಿಂದ ಇಳಿಯುತ್ತಿದ್ದಾಗ, ಹಿಂಬದಿಯಿಂದ ಇಕೋ ಸ್ಪೋರ್ಟ್ (EcoSport) ಕಾರಿನಲ್ಲಿ ಬಂದಿದ್ದ ದುಷ್ಕರ್ಮಿ ಕ್ಷಣಾರ್ಧದಲ್ಲಿ ಆಕೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು ಇದೀಗ ಆರೋಪಿಯನ್ನು ಕಾರು ಸಮೇತ ಹೆಡೆಮುರಿ ಕಟ್ಟಿದ್ದಾರೆ.

ವಶಪಡಿಸಿಕೊಂಡ ವಸ್ತುಗಳು:

​ಚಿನ್ನದ ಸರ: ೧.೫೦ ಲಕ್ಷ ರೂ. ಬೆಲೆಬಾಳುವ ೧೦ ಗ್ರಾಂ ತೂಕದ ಬಂಗಾರದ ಸರ , ಕೃತ್ಯಕ್ಕೆ ಬಳಸಿದ್ದ ೫ ಲಕ್ಷ ರೂ. ಮೌಲ್ಯದ ಇಕೋ ಸ್ಪೋರ್ಟ್ ಕಾರು.

​ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ (ಪಿಐ) ರಾಘವೇಂದ್ರ ಕಾಂಡಿಕೆ ಹಾಗೂ ಪಿ.ಎಸ್.ಐ ನವೀನ್ ಮಠಪತಿ ಮತ್ತು ಠಾಣಾ ಸಿಬ್ಬಂದಿ ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.