w
Headlines
Home » ಕಬ್ಬಿಣದ ಬಿಲ್ಲೆಟ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು

ಕಬ್ಬಿಣದ ಬಿಲ್ಲೆಟ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು

GridArt 20260428

ಕಬ್ಬಿಣದ ಬಿಲ್ಲೆಟ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು

A contract worker died in a tragic accident at VISL Bhadravathi after a heavy iron billet fell due to a crane cable failure. The victim succumbed to severe injuries before reaching the hospital.

ಶಿವಮೊಗ್ಗ: ಭದ್ರಾವತಿ ನಗರದಲ್ಲಿರುವ Visvesvaraya Iron and Steel Limited (ವಿಐಎಸ್‌ಎಲ್) ಕಾರ್ಖಾನೆಯಲ್ಲಿ ಸಂಭವಿಸಿದ ದಾರುಣ ದುರಂತದಲ್ಲಿ ಗುತ್ತಿಗೆ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಭದ್ರಾವತಿಯ ನಿವಾಸಿ ವಿನೋದ್ ಕುಮಾರ್ ಎಸ್ (36) ಎಂದು ಗುರುತಿಸಲಾಗಿದೆ.

ಕಳೆದ 15 ವರ್ಷಗಳಿಂದ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಅವರು, ಘಟನೆಯ ದಿನ ವಿಐಎಸ್‌ಎಲ್ ಆವರಣದಲ್ಲಿ ಕಬ್ಬಿಣದ ಬಿಲ್ಲೆಟ್‌ಗಳನ್ನು ಅನ್‌ಲೋಡ್ ಮಾಡುವ ಕಾರ್ಯದಲ್ಲಿ ತೊಡಗಿದ್ದರು.

ಸಿಸ್ಟರ್ ಪ್ಲಾಂಟ್‌ನಿಂದ ತರಲಾಗಿದ್ದ ಭಾರೀ ತೂಕದ ಬಿಲ್ಲೆಟ್‌ಗಳನ್ನು ಕ್ರೇನ್ ಮೂಲಕ ಇಳಿಸುವ ಸಂದರ್ಭದಲ್ಲಿ ಏಕಾಏಕಿ ಕ್ರೇನ್‌ನ ವೈರ್ ರೋಪ್ ತುಂಡಾಗಿದೆ. ಪರಿಣಾಮವಾಗಿ ಮೇಲಿದ್ದ ಬಿಲ್ಲೆಟ್ ಕೆಳಗೆ ಕೆಲಸ ಮಾಡುತ್ತಿದ್ದ ವಿನೋದ್ ಕುಮಾರ್ ಅವರ ಮೇಲೆ ಬಿದ್ದು, ಎಡಗಾಲು ಹಾಗೂ ಸೊಂಟ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ತೀವ್ರ ರಕ್ತಸ್ರಾವ ಉಂಟಾಗಿ ಅವರ ಸ್ಥಿತಿ ಗಂಭೀರಗೊಂಡಿತು.

ಗಾಯಾಳುವನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅತಿಯಾದ ರಕ್ತಸ್ರಾವದಿಂದ ಅವರು ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಸ್ತುತ ಮೃತದೇಹವನ್ನು ಶವಪರೀಕ್ಷೆಗಾಗಿ McGann Hospital ಗೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.