w
Headlines
Home » ಬೋರ್‌ವೆಲ್ ಮಂಜೂರಿಗೆ ಲಂಚ: ಅಧಿಕಾರಿಗೆ ಜೈಲು ಹಾಗೂ ₹40 ಸಾವಿರ ದಂಡ

ಬೋರ್‌ವೆಲ್ ಮಂಜೂರಿಗೆ ಲಂಚ: ಅಧಿಕಾರಿಗೆ ಜೈಲು ಹಾಗೂ ₹40 ಸಾವಿರ ದಂಡ

1002475144

A Shivamogga court sentenced a district manager to two years in prison and fined ₹40,000 for accepting a ₹10,000 bribe under the Ganga Kalyana scheme, following a Lokayukta trap case.

ಶಿವಮೊಗ್ಗ: ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಅಧಿಕಾರಿಗೆ ಶಿವಮೊಗ್ಗ ನ್ಯಾಯಾಲಯವು ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಆರ್.ಎಸ್. ಪರಮೇಶ್ವರಪ್ಪ ಶಿಕ್ಷೆಗೆ ಗುರಿಯಾದ ಅಧಿಕಾರಿ.

ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ಕೊಳವೆ ಬಾವಿ ಕೊರೆಸಿಕೊಡಲು ಫಲಾನುಭವಿಯಿಂದ ₹10,000 ಲಂಚ ಸ್ವೀಕರಿಸುವ ವೇಳೆ 13-07-2017ರಂದು ತಮ್ಮ ಕಚೇರಿಯಲ್ಲೇ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದರು.

ಸಾಗರ ತಾಲೂಕು ಹೊಸಗುಂದ ನಿವಾಸಿ ಹೆಚ್.ಎಸ್. ಜನಾರ್ಧನ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಡಿಎಸ್‌ಪಿ ಎ. ಚಂದ್ರಪ್ಪ ತನಿಖೆ ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ಏಪ್ರಿಲ್ 2ರಂದು ತೀರ್ಪು ನೀಡಿದೆ.

ಲೋಕಾಯುಕ್ತ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ. ಸುಂದರ್‌ರಾಜ್ ವಾದ ಮಂಡಿಸಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.