w
Headlines
Home » ಸಾಗರದಲ್ಲಿ ಹೊಟೆಲ್ ಕಾರ್ಮಿಕನ ಹತ್ಯೆ, ಕಾರಿನೊಳಗೆ ಶವ ಪತ್ತೆ

ಸಾಗರದಲ್ಲಿ ಹೊಟೆಲ್ ಕಾರ್ಮಿಕನ ಹತ್ಯೆ, ಕಾರಿನೊಳಗೆ ಶವ ಪತ್ತೆ

GridArt 20260402

ಸಾಗರದಲ್ಲಿ ಹೊಟೆಲ್ ಕಾರ್ಮಿಕನ ಹತ್ಯೆ, ಕಾರಿನೊಳಗೆ ಶವ ಪತ್ತೆ

A hotel worker from Bihar was found dead inside a car in Sagara, Shivamogga district. Police suspect a financial dispute led to the murder, and the hotel owner has been taken into custody.

ಸಾಗರ: ಹೊಟೆಲ್ ಕಾರ್ಮಿಕನೊಬ್ಬನ ಹತ್ಯೆ ಪ್ರಕರಣವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಎಸ್‌ಪಿ ಬಿ. ನಿಖಿಲ್ ತಿಳಿಸಿದ್ದಾರೆ.

ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಟಿಂಕು ಶರ್ಮಾ (30) ಗುರುವಾರ ಬೆಳಗ್ಗೆ ಹೊಂಡಾ ಸಿಟಿ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾನೆ.

ಈ ಸಂಬಂಧ ಕೆಫೆ ಮಾಲಿಕ ಇಮ್ರಾನ್ (30) ಅವರನ್ನು ಆರೋಪಿಯಾಗಿ ಗುರುತಿಸಲಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೃತ ಟಿಂಕು ಶರ್ಮಾ ಮತ್ತು ಮಾಲಿಕ ಇಮ್ರಾನ್ ನಡುವೆ ಹಣಕಾಸಿನ ವಿಚಾರವಾಗಿ ಬುಧವಾರ ರಾತ್ರಿ ಜಗಳ ನಡೆದಿತ್ತು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಕೂಡ ಇದೇ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಈ ವೇಳೆ ಇಮ್ರಾನ್ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎಸ್‌ಪಿ ನಿಖಿಲ್ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.