w
Headlines
Home » ಗಾಂಜಾ ಮಾರಾಟ ಮಾಡುತಿದ್ದ ಐವರ ಬಂಧನ, ಲಕ್ಷಾಂತರ ಮೌಲ್ಯದ ವಸ್ತು ವಶ

ಗಾಂಜಾ ಮಾರಾಟ ಮಾಡುತಿದ್ದ ಐವರ ಬಂಧನ, ಲಕ್ಷಾಂತರ ಮೌಲ್ಯದ ವಸ್ತು ವಶ

IMG 20260425

ಗಾಂಜಾ ಮಾರಾಟ ಮಾಡುತಿದ್ದ ಐವರ ಬಂಧನ, ಲಕ್ಷಾಂತರ ಮೌಲ್ಯದ ವಸ್ತು ವಶ

Five individuals were arrested in Shivamogga district for illegal ganja sale. Police seized 4.69 kg of cannabis worth ₹2.34 lakh and a Honda Activa during a raid near Holehonnuru bypass.

ಶಿವಮೊಗ್ಗ, ಏ. 25: ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಗಾಂಜಾ ಮಾರಾಟ ನಡೆಸುತ್ತಿದ್ದವರ ವಿರುದ್ಧ ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ.

ಏಪ್ರಿಲ್ 24ರಂದು ಹೊಳೆಹೊನ್ನೂರಿನಿಂದ ಶಿವಮೊಗ್ಗದತ್ತ ಸಾಗುವ ಎನ್‌ಎಚ್–369 ಬೈಪಾಸ್ ರಸ್ತೆಯಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಹೊಳೆಹೊನ್ನೂರು ಪೊಲೀಸ್ ನಿರೀಕ್ಷಕ ಶಿವಪ್ರಸಾದ್ ಎಂ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿತು.

ದಾಳಿಯ ವೇಳೆ ಆರೋಪಿತರಾದ ಲವ್ (24), ಲೇಖಕ್ (20), ಮನೋಜ್ (27), ಕಿರಣ್ (24) ಹಾಗೂ ಗಿರೀಶ್ (28) ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು ₹2.34 ಲಕ್ಷ ಮೌಲ್ಯದ 4 ಕೆಜಿ 690 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಹೊಂಡಾ ಆಕ್ಟೀವಾ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 0119/2026 ದಾಖಲಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆ 1985ರ ಸೆಕ್ಷನ್ 20(b)(ii)(B) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.