Headlines

ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ಇಲ್ಲ : ಪ್ರಿಮಿಯಂ ಪೆಟ್ರೋಲ್ ದರ ಏರಿಕೆ ಮಾತ್ರ, ಸಾಮಾನ್ಯ ಪೆಟ್ರೋಲ್ ಸ್ಥಿರ

ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ಇಲ್ಲ: ಪ್ರಿಮಿಯಂ ಪೆಟ್ರೋಲ್ ದರ ಏರಿಕೆ ಮಾತ್ರ, ಸಾಮಾನ್ಯ ಪೆಟ್ರೋಲ್ ಸ್ಥಿರ

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಪೆಟ್ರೋಲ್ ಕೊರತೆ ಇದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಬಂಕ್ ಮಾಲೀಕರು, ಪಟ್ಟಣದಲ್ಲಿ ಯಾವುದೇ ಇಂಧನ ಅಭಾವವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಟ್ಟಣದ MRPL ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಮರ್ಪಕವಾಗಿ ಲಭ್ಯವಿದ್ದು, ಉಳಿದ ಬಂಕ್‌ಗಳಲ್ಲಿಯೂ ನಾಳೆಯೊಳಗೆ ಇಂಧನ ಸರಬರಾಜು ಆಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಗ್ರಾಹಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ, ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಮಾತ್ರ ಸ್ವಲ್ಪ ಏರಿಕೆ ಕಂಡುಬಂದಿದ್ದು, ಸಾಮಾನ್ಯ (ನಾರ್ಮಲ್) ಪೆಟ್ರೋಲ್ ದರದಲ್ಲಿ ಯಾವುದೇ ಏರಿಕೆ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಜನರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.

ಈ ವಾರ ಹಬ್ಬಗಳ ಹಿನ್ನೆಲೆ ಜನರ ಸಂಚಾರ ಹೆಚ್ಚಿದ ಪರಿಣಾಮ ಇಂಧನದ ಬೇಡಿಕೆಯೂ ಏರಿಕೆಯಾಗಿದೆ. ಇದರಿಂದ ಕೆಲವೆಡೆ ತಾತ್ಕಾಲಿಕ ಒತ್ತಡ ಉಂಟಾದರೂ, ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜು ನಿರಂತರವಾಗಿ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಒಟ್ಟಾರೆ, ರಿಪ್ಪನ್‌ಪೇಟೆಯಲ್ಲಿ ಇಂಧನ ಕೊರತೆ ಇಲ್ಲ ಎಂಬುದನ್ನು ಪುನರುಚ್ಚರಿಸಿದ ಬಂಕ್ ಮಾಲೀಕರು, ಗಾಳಿ ಸುದ್ದಿಗಳಿಗೆ ಒಳಗಾಗದೇ ಶಾಂತವಾಗಿರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

About The Author