w
Headlines
Home » ರಿಪ್ಪನ್‌ಪೇಟೆಯ ವಡಗೆರೆ ಬಳಿ ಟ್ರ್ಯಾಕ್ಟರ್–ಬೈಕ್ ಡಿಕ್ಕಿ – ಮಹಿಳೆ ಸ್ಥಳದಲ್ಲೇ ಸಾವು, ಪತಿ–ಮಗು ಗಾಯ

ರಿಪ್ಪನ್‌ಪೇಟೆಯ ವಡಗೆರೆ ಬಳಿ ಟ್ರ್ಯಾಕ್ಟರ್–ಬೈಕ್ ಡಿಕ್ಕಿ – ಮಹಿಳೆ ಸ್ಥಳದಲ್ಲೇ ಸಾವು, ಪತಿ–ಮಗು ಗಾಯ

GridArt 20260114 192509720 wm

A tragic road accident near Vadagere on Sagar Road in Ripponpete claimed the life of a woman from Shikaripura after a tractor rammed into a bike. Her husband and child were injured and shifted to hospital.

ರಿಪ್ಪನ್‌ಪೇಟೆಯ ವಡಗೆರೆ ಬಳಿ ಟ್ರ್ಯಾಕ್ಟರ್–ಬೈಕ್ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು, ಪತಿ–ಮಗು ಗಾಯ

ರಿಪ್ಪನ್‌ಪೇಟೆ: ಸಾಗರ ರಸ್ತೆಯ ವಡಗೆರೆ ಸಮೀಪ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಶಿಕಾರಿಪುರ ಮೂಲದ ಅಮೃತಾ ಬಿನ್ ನಾಗರಾಜ್ ಎಂದು ಗುರುತಿಸಲಾಗಿದೆ.

ಅಮೃತಾ ತಮ್ಮ ಪತಿ ನಾಗರಾಜ್ ಹಾಗೂ ಇಬ್ಬರು ಮಕ್ಕಳೊಂದಿಗೆ ಶಿಕಾರಿಪುರದಿಂದ ರಿಪ್ಪನ್‌ಪೇಟೆಗೆ ಕೆಂಚನಾಲ ಜಾತ್ರೆ ಹಿನ್ನೆಲೆಯಲ್ಲಿ ತಂಗಿಯ ಮನೆಗೆ ಪಲ್ಸರ್ ಬೈಕ್‌ನಲ್ಲಿ ಆಗಮಿಸುತ್ತಿದ್ದ ವೇಳೆ, ವಡಗೆರೆ ಬಳಿ ಬ್ರೇಕ್ ಹಾಕಿದ ಸಮಯದಲ್ಲಿ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಮೃತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ನಾಗರಾಜ್ ಹಾಗೂ ಮಗು ಗಾಯಗೊಂಡಿದ್ದು, ಅವರನ್ನು ತಕ್ಷಣ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ರಿಪ್ಪನ್‌ಪೇಟೆ ಪಿಎಸ್‌ಐ ರಾಜು ರೆಡ್ಡಿ ನೇತೃತ್ವದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮರಣೋತ್ತರ ಪರೀಕ್ಷಾ ಘಟಕದಲ್ಲಿ ಇರಿಸಲಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.