
ರಿಪ್ಪನ್‌ಪೇಟೆ – ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶ್ರೀಗಳ 118 ನೇ ಜನ್ಮ ದಿನಾಚರಣೆ
ರಿಪ್ಪನ್‌ಪೇಟೆ – ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶ್ರೀಗಳ 118 ನೇ ಜನ್ಮ ದಿನಾಚರಣೆ ರಿಪ್ಪನ್‌ಪೇಟೆ : ತ್ರಿವಿಧ ದಾಸೋಹಿ ,ಶತಾಯಿಷಿ ಕಾಯಕಯೋಗಿ ದಿವಂಗತ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೮ ನೇ ವರ್ಷದ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು. ರಿಪ್ಪನ್‌ಪೇಟೆ ಭಕ್ತ ಬಳಗದವರು ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೮ ನೇ ವರ್ಷದ ಜನ್ಮ ದಿನಾಚರಣೆಯಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿ ಸೇವೆ ಸಲ್ಲಿಸಿದರು. ಸಾಗರ ನಗರ ಸಭೆಯ ನಿವೃತ್ತ ಸಮುದಾಯ ಸಂಘಟನಾಧಿಕಾರಿ…