ಇನ್‌ಸ್ಟಾಗ್ರಾಂ ‘ರೀಲ್ಸ್’ ಅಭಿಮಾನಿ ಸೋಗಿನಲ್ಲಿ ಶಿಕ್ಷಕನ ದರೋಡೆ – ಶಿವಮೊಗ್ಗದಲ್ಲಿ ಆಘಾತಕಾರಿ ಘಟನೆ
ಇನ್‌ಸ್ಟಾಗ್ರಾಂ ‘ರೀಲ್ಸ್’ ಅಭಿಮಾನಿ ಸೋಗಿನಲ್ಲಿ ಶಿಕ್ಷಕನ ದರೋಡೆ – ಶಿವಮೊಗ್ಗದಲ್ಲಿ ಆಘಾತಕಾರಿ ಘಟನೆ ಶಿವಮೊಗ್ಗ: ತಮ್ಮ ಇನ್‌ಸ್ಟಾಗ್ರಾಂ ರೀಲ್ಸ್‌ಗೆ ಅಭಿಮಾನಿ ಎಂದು ನಂಬಿಸಿ, ಶಿಕ್ಷಕರೊಬ್ಬರನ್ನು ದರೋಡೆ ಮಾಡಿರುವ ಅಚ್ಚರಿಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಕೃತ್ಯ ನಡೆದಿದೆ. ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ನಿಯಮಿತವಾಗಿ ರೀಲ್ಸ್ ಅಪ್‌ಲೋಡ್ ಮಾಡುತ್ತಿದ್ದರು. ಅವರ ರೀಲ್ಸ್‌ಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬ, ಮೆಸೇಜ್ ಮೂಲಕ ಶಿಕ್ಷಕರನ್ನು ಸಂಪರ್ಕಿಸಿದ್ದ. ಬಳಿಕ ಅವರನ್ನು ಭೇಟಿಯಾಗಬೇಕೆಂದು ಕೋರಿದ್ದ…