Headlines

ಆನಂದಪುರ | ಮನೆಗೆ ಆಕಸ್ಮಿಕ ಬೆಂಕಿ – ಅಪಾರ ನಷ್ಟ

ಆನಂದಪುರ | ಮನೆಗೆ ಆಕಸ್ಮಿಕ ಬೆಂಕಿ – ಅಪಾರ ನಷ್ಟ

ಆನಂದಪುರ: ಇಲ್ಲಿಗೆ  ಸಮೀಪವಿರುವ ಮದ್ಲೆಸರ ನಾವಟಿ ಗ್ರಾಮದಲ್ಲಿ   ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟವಾಗಿದೆ.

ಘಟನೆಯಲ್ಲಿ ಮನೆಯು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.

ಯಡೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದ್ಲೆಸರ ನಾವಟಿ ಗ್ರಾಮದ ನಿವಾಸಿ ಜಯಮ್ಮ ಅವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯ ಮೇಲ್ಚಾವಣಿ ಸೇರಿದಂತೆ ಒಳಗೆ ಇದ್ದ ಎಲ್ಲಾ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿವೆ.

ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಸೂಚನೆಯಂತೆ ಅವರ ಆಪ್ತ ಸಹಾಯಕರು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.