Headlines

ರಿಪ್ಪನ್‌ಪೇಟೆ : ಈದ್ ಮಿಲಾದ್ ಅಂಗವಾಗಿ ನಾಳೆ(17-09-2025) ಸೌಹಾರ್ದ ಸಂಗಮ

ರಿಪ್ಪನ್‌ಪೇಟೆ : ಈದ್ ಮಿಲಾದ್ ಅಂಗವಾಗಿ ನಾಳೆ(17-09-2025) ಸೌಹಾರ್ದ ಸಮಾವೇಶ ರಿಪ್ಪನ್‌ಪೇಟೆ : ಈದ್ ಮಿಲಾದ್ ಹಬ್ಬದ ಅಂಗವಾಗಿ ಬುಧವಾರ ಸೌಹಾರ್ದ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾದ ಅಫ಼್ಜಲ್ ಬ್ಯಾರಿ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬುಧವಾರ ಮೊಹಿಯುದ್ದೀನ್ ಜುಮ್ಮಾ ಮಸೀದಿ,ಮೆಕ್ಕಾ ಮಸೀದಿ ,ಈದ್ ಮಿಲಾದ್ ಸಮಿತಿ ,ತಾಅಜಿಜುಲ್ ಅರಬ್ಬಿಕ್ ಮದರಸ ,ಬದ್ರಿಯಾ ಮದರಸ ಗವಟೂರು ,SYS ಹಾಗೂ SSF ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರವಾದಿಯವರ 1500ನೇ ಜನ್ಮ ದಿನದ ಪ್ರಯುಕ್ತ…

Read More

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ಮಹಿಳೆ ಸಾವು , ಇನ್ನಿಬ್ಬರು ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ಮಹಿಳೆ ಸಾವು , ಇನ್ನಿಬ್ಬರು ಗಂಭೀರ ರಿಪ್ಪನ್ ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಸ್ತ್ಗಳದಲ್ಲಿಯೇ ಓರ್ವ ವೃದ್ದೆ ಮೃತಪಟ್ಟಿದ್ದು ಇನ್ನಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ಚಿಪ್ಪಿಗರ ಕೆರೆಯಲ್ಲಿ ನಡೆದಿದೆ. ತ್ಯಾಗರ್ತಿಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದು ಹಿಂದಿರುಗುತ್ತಿರುವ ಸಂಧರ್ಭದಲ್ಲಿ ಪಟ್ಟಣದ ಚಿಪ್ಪಿಗರ ಕೆರೆ ಏರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಸ್ವಿಫ಼್ಟ್ ಕಾರು…

Read More

ನೀರಿನ ಹೊಂಡಕ್ಕೆ ಬಿದ್ದು 14 ವರ್ಷದ ಬಾಲಕನ ಅನುಮಾನಾಸ್ಪದ ಸಾವು – ಇದು ಆಕಸ್ಮಿಕವಲ್ಲ, ಕೊಲೆ ಎಂದು ಪೋಷಕರ ಕಣ್ಣೀರಿನ ಅಳಲು

ನೀರಿನ ಹೊಂಡಕ್ಕೆ ಬಿದ್ದು 14 ವರ್ಷದ ಬಾಲಕನ ಅನುಮಾನಾಸ್ಪದ ಸಾವು – ಇದು ಆಕಸ್ಮಿಕವಲ್ಲ, ಕೊಲೆ ಎಂದು ಪೋಷಕರ ಕಣ್ಣೀರಿನ ಅಳಲು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕರಿನಗೊಳ್ಳಿ ಗ್ರಾಮದಲ್ಲಿ 14 ವರ್ಷದ ಬಾಲಕನ ಸಾವು ಆಘಾತ ಮೂಡಿಸಿದೆ. ಮೇ 26 ರಂದು ಸುರೇಶ್ ಎಂಬುವರ ಪುತ್ರ ಸುಬ್ರಹ್ಮಣ್ಯ(14) ಮನೆಯ ಸಮೀಪದ ಶುಂಠಿ ತೋಟದಲ್ಲಿದ್ದ ಕೃತಕ ನೀರಿನ ಹೊಂಡದಲ್ಲಿ ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ದುರಂತದ ಕರಿ ನೆರಳನ್ನು ಬೀರಿದೆ. ಪೊಲೀಸರು ಇದನ್ನು “ಆಕಸ್ಮಿಕ ಸಾವು”…

Read More

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು ಹುಂಚ ಭಾಗದಲ್ಲಿ ಕಾಡುಕೋಣಗಳ ಮಾರಣಹೋಮಕ್ಕೆ ಅಂತ್ಯ ಯಾವಾಗ? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂ. 52/2 ರಲ್ಲಿ ರಾಮಪ್ಪ ಬಿನ್ ಮರಿಯಪ್ಪ ಅವರ ಅಡಿಕೆ ತೋಟದ ಹೊಂಡದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆಯಾಗಿದ್ದು, ಈ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಹೊರಬಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ…

Read More

ಒಕ್ಕಲಿಗರ ಸಂಘ ಜನಹಿತ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ – ಆರ್ ಎಂ ಮಂಜುನಾಥ್ ಗೌಡ

ಒಕ್ಕಲಿಗರ ಸಂಘ ಜನಹಿತ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ – ಆರ್ ಎಂ ಮಂಜುನಾಥ್ ಗೌಡ ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ಒಕ್ಕಲಿಗರ ಸಮಾಜವು ಜನಸಂಖ್ಯೆಯಲ್ಲಿ ಕಡಿಮೆಯಾದರೂ ಜನಹಿತ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಬಡವರ ಸಹಾಯಕ್ಕೆ ಸದಾ ಕೈಚಾಚಿ ಸಮಾಜದಲ್ಲಿ ಮಾದರಿಯಾಗುತ್ತಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅಭಿಪ್ರಾಯಪಟ್ಟರು. ರಿಪ್ಪನ್‌ಪೇಟೆಯ ವಿಶ್ವಮಾನವ ಒಕ್ಕಲಿಗರ ಸಭಾಭವನದ ಹಿಂಭಾಗದಲ್ಲಿ ನೂತನ ಅಡುಗೆ ಕೊಠಡಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, “ಒಕ್ಕಲಿಗ ಸಮಾಜವು ತನ್ನ ಸಂಘಟನೆಯೊಂದಿಗೆ ಇತರ ಸಮಾಜಗಳನ್ನೂ ಪ್ರೀತಿ–ವಿಶ್ವಾಸದಿಂದ ಸ್ವೀಕರಿಸುತ್ತದೆ. ಕುವೆಂಪುರವರ…

Read More

ರಸ್ತೆ ಅಪಘಾತ : ಮೆಡಿಕಲ್ ಪ್ರತಿನಿಧಿ ಮಹೇಶ್ ಅಕಾಲಿಕ ಸಾವು

ರಸ್ತೆ ಅಪಘಾತ : ಮೆಡಿಕಲ್ ಪ್ರತಿನಿಧಿ ಮಹೇಶ್ ಅಕಾಲಿಕ ಸಾವು ಶಿವಮೊಗ್ಗ: ಮಲವಗೋಪ್ಪದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಮೆಡಿಕಲ್ ಪ್ರತಿನಿಧಿ ಮಹೇಶ್ ಅವರು ದುರ್ಮರಣ ಕಂಡಿದ್ದಾರೆ. ಮಹೇಶ್ ಅವರು ಎಥರ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ರಸ್ತೆಯ ಆಳವಾದ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುವ ವೇಳೆ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಕಾಲಿಕವಾಗಿ ಜೀವ ಕಳೆದುಕೊಂಡರು. ನಗರದಲ್ಲಿ…

Read More

SHIVAMOGGA | ವೈದ್ಯೆಯ ವಾಟ್ಸಪ್ ಹ್ಯಾಕ್ ಮಾಡಿ ಹಣ ವಂಚನೆ

SHIVAMOGGA | ವೈದ್ಯೆಯ ವಾಟ್ಸಪ್ ಹ್ಯಾಕ್ ಮಾಡಿ ಹಣ ವಂಚನೆ ಶಿವಮೊಗ್ಗ: ವೈದ್ಯೆಯೊಬ್ಬರ ವಾಟ್ಸಪ್ ಹ್ಯಾಕ್  ಮಾಡಿ ವೈದ್ಯರೊಬ್ಬರ ಮೊಬೈಲ್‌ಗೆ ಮೆಸೇಜ್ ಕಳುಹಿಸಿ ೯೫,೦೦೦ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಶಿವಮೊಗ್ಗದ ವೈದ್ಯೆಯೊಬ್ಬರ ವಾಟ್ಸಪ್ ನಂಬರ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು ಹಣದ ತುರ್ತು ಅಗತ್ಯವಿದೆ ಎಂದು ಸಹೋದ್ಯೋಗಿಗೆ ಮೆಸೇಜ್ ಕಳುಹಿಸಿದ್ದರು. ಅದನ್ನು ನಂಬಿದ ಸಹೋದ್ಯೋಗಿ ಆ ವಾಟ್ಸಪ್ ಮೆಸೇಜ್‌ನಲ್ಲಿ ಕಳುಹಿಸಲಾಗಿದ್ದ ಮತ್ತೊಂದು ಮೊಬೈಲ್ ನಂಬರ್‌ಗೆ ಫೋನ್ ಪೇ ಮೂಲಕ ಎರಡು…

Read More

HUMACHA | ಎರಡು ಕಾಡುಕೋಣಗಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ – ವಿಷಪ್ರಯೋಗ ಶಂಕೆ!

HUMACHA | ಕೊಳೆತ ಸ್ಥಿತಿಯಲ್ಲಿ ಎರಡು ಕಾಡುಕೋಣಗಳ ಕಳೇಬರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ತೋಟವೊಂದರ ಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಕಾಡುಕೋಣಗಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂಬರ 52 /2 ರ ರಾಮಪ್ಪ ಬಿನ್ ಮರಿಯಪ್ಪ ಎಂಬುವವರ ಅಡಿಕೆ ತೋಟದ ಹೊಂಡವೊಂದರಲ್ಲಿ ಎರಡು ಕಾಡುಕೋಣಗಳ ಮೃತದೇಹ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಕಾಡುಕೋಣ ಮೃತಪಟ್ಟು ನಾಲ್ಕೈದು ದಿನಗಳಾಗಿರಬಹುದು ಎನ್ನಲಾಗುತಿದ್ದು , ವಿಷಪ್ರಾಶನ…

Read More

ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ

ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ಸಾಗರ: “ನಮ್ಮ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನ ಜಿಂದಾಬಾದ್ ಎನ್ನುವವರು ದೇಶದ್ರೋಹಿಗಳು. ಅವರಿಗೆ ಈ ನೆಲದಲ್ಲಿ ಬದುಕುವ ಹಕ್ಕಿಲ್ಲ. ಅಂತಹವರನ್ನು ಗುಂಡಿಕ್ಕಿ ಕೊಲ್ಲಬೇಕು” ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, “ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅತ್ಯಂತ ಖಂಡನೀಯ ಕೃತ್ಯ. ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಈ…

Read More

ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 1.06 ಕೋಟಿ ರೂ. ವಂಚನೆ – ದೂರು ದಾಖಲು

ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 1.06 ಕೋಟಿ ರೂ. ವಂಚನೆ – ದೂರು ದಾಖಲು ಟ್ರೇಡಿಂಗ್ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ 1.06 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತನೊಬ್ಬ ಟ್ರೇಡಿಂಗ್ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿ ವಾಟ್ಸ್‌ಆಪ್ ಗ್ರೂಪ್‌ಗೆ ಸೇರುವಂತೆ ಲಿಂಕ್ ಕಳುಹಿಸಿದ್ದ. ವಾಟ್ಸ್‌ಆಪ್ ಗ್ರೂಪ್‌ನಲ್ಲಿ ತನಿಷ್ಕಾ ಸನ್ಯಾಮ್ ಎಂದು ಪರಿಚಯ ಮಾಡಿಕೊಂಡು, ಟ್ರೇಡಿಂಗ್ ಮಾಡುವ ಮೊಬೈಲ್…

Read More