ಬಂಕಾಪುರ: ಪತ್ರಕರ್ತ ಸಂಘಕ್ಕೆ ಆಯ್ಕೆಯಾದವರಿಗೆ ಗೌರವ – ಯುವಕರಿಂದ ಸಂಭ್ರಮದ ಸನ್ಮಾನ
ಬಂಕಾಪುರ್ : ಹಾವೇರಿ ಜಿಲ್ಲೆಯ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹಾವೇರಿ ಜಿಲ್ಲಾ ಘಟಕದ ಆಡಳಿತ ಮಂಡಳಿ ಚುನಾವಣೆಯಲ್ಲಿ ಶಿಗ್ಗಾವಿ ತಾಲೂಕಿನ ಪತ್ರಕರ್ತರಾದ ಪರಸಪ್ಪ ಸತ್ಯಪ್ಪನವರ ಅವರು ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಯಶಸ್ಸಿನ ಹಿನ್ನೆಲೆಯಲ್ಲಿ ಬಂಕಾಪುರ ಪಟ್ಟಣದ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳಿ ಯುವಕರು ಪರಸಪ್ಪ ಸತ್ಯಪ್ಪನವರ ಅವರಿಗೆ ವಿಶೇಷವಾಗಿ ಸನ್ಮಾನ ಸಲ್ಲಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಕುರುಬ ಸಮಾಜದ ತಾಲೂಕು ಅಧ್ಯಕ್ಷರಾದ ಚಂದ್ರು ಮಾಯಣವ್ವರ್ ಅವರಿಗೂ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಸೋಮಣ್ಣಾ ಕುರಿ, ಸತೀಶ್ ಸೋಮಣ್ಣವರ, ಪಿ.ಎಸ್.ಐ ಡಿ.ಎನ್ ಕುಡಲ್, ಬಸವರಾಜ್ ಕುರಿ, ಗಜೇಂದ್ರ ಕುಡಲ್, ಬೀರಪ್ಪಾ ಸುಂಕದ್, ಶಂಕ್ರಣ್ಣ ಗೊಡ್ಡೆಮ್ಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಫೋಟೋ ಫೈಲ್ ಹೆಸರು: ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಸನ್ಮಾನ
ವರದಿ: ನಿಂಗರಾಜ್ ಕುಡಲ್, ಹಾವೇರಿ ಜಿಲ್ಲೆ, ಬಂಕಾಪುರ