Headlines

ಕೌಟುಂಬಿಕ ಕಲಹ ಹಿನ್ನಲೆ – ವಿನೋಬನಗರದಲ್ಲಿ ಯುವಕನ ಭೀಕರ ಕೊಲೆ

District Superintendent of Police Mithun Kumar informed in this regard that preliminary investigation has revealed that a family-related marital dispute may have been the main reason for the attack on the deceased youth.

ಕೌಟುಂಬಿಕ ಕಲಹ ಹಿನ್ನಲೆ – ವಿನೋಬನಗರದಲ್ಲಿ ಯುವಕನ ಭೀಕರ ಕೊಲೆ

Family feud behind brutal murder of youth in Vinobanagar

ಶಿವಮೊಗ್ಗ : ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಂಭವಿಸಿದೆ.

ಅರುಣ್ (26) ಎಂಬ ಯುವಕ ಕೊಲೆಯಾದವನು ಎಂದು ಗುರುತಿಸಲಾಗಿದೆ.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು, ಮೃತ ಯುವಕನ ಮೇಲೆ ನಡೆದ ದಾಳಿಗೆ ಕೌಟುಂಬಿಕ ಹಿನ್ನೆಲೆಯ ವೈವಾಹಿಕ ವಿವಾದವೇ ಪ್ರಮುಖ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈಗಾಗಲೇ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆ ಮುಂದುವರಿದಂತೆ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.